Job Description: * ಜಪಾನ್ ರಾಷ್ಟ್ರವು ತಂತ್ರಜ್ಞಾನದಲ್ಲಿ ಮುಂದುವರೆದ ರಾಷ್ಟ್ರಎಂದು ಹೇಳಬಹುದಾಗಿದೆ ಪ್ರಪಂಚದಲ್ಲಿಯೇ ಅತಿ ಎತ್ತರದ ದುಬೈನ ಜಾರ್ಜ್ ಖಲೀಫಾಗಿಂತ ಎತ್ತರದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. * ಜಪಾನ್ ನ ಕಟ್ಟಡವು ಜಾರ್ಜ್ ಖಲೀಫಾಗಿಂತ ಎತ್ತರವಾಗಿದ್ದು ಜಾರ್ಜ್ ಖಲೀಫ್ದ ದ ಎತ್ತರ 2716.5 ಅಡಿ ಎತ್ತರವಿದೆ, ಈಗ ನಿರ್ಮಾಣ ಆಗಿರುವ ಜಪಾನ್ ನಲ್ಲಿಯ ಕಟ್ಟಡವು 5577 ಅಡಿ ಎತ್ತರವಿರುತ್ತದೆ ಎಂದು ಹೇಳಲಾಗಿದೆ. * ಜಪಾನ್ ನ ಆಗ್ನೇಯ ಭಾಗವಾದ ಟೋಕಿಯೋದ ಕೊಲ್ಲಿಯಲ್ಲಿ ಇದು ನಿರ್ಮಾಣವಾಗುತ್ತಿದೆ, ಈ ಒಂದು ಯೋಜನೆಗೆ "ನೆಕ್ಸ್ಟ್ ಟೋಕಿಯೋ" ಎಂದು ಕರೆಯಲಾಗುತ್ತದೆ. ಮಾನವ ನಿರ್ಮಿತ ಷಡ್ಬುಜಾಕೃತಿಯ ದ್ವೀಪಗಳ ಸರಪಳಿಯನ್ನು ಇದು ಹೊಂದಲಿದೆ, ಇದು ಟೋಕಿಯೋವನ್ನು ಪ್ರವಾಹದಿಂದ ರಕ್ಷಿಸುವ ಅಡ್ಡಗೋಡೆಯಾಗಿ ನಿರ್ಮಾಣವಾಗುತ್ತಿದೆ. * ಸ್ಕೈ ಮೈಲ್ ಟವರ್ ಹಲವಾರು ವಿಶೇಷತೆಗಳನ್ನು ಹೊಂದಿದೆ. ಅವುಗಳೆಂದರೆ, - ಇದು ಪ್ಯಾರಿಸ್ ನಲ್ಲಿರುವ ಟವರ್ ಗಳಿಗಿಂತ 5 ಪಟ್ಟು ಎತ್ತರವಾಗಿ ಇರುತ್ತದೆ. - ಷಡ್ಭುಜಾಕೃತಿಯ ಅಕಾರ ಹೊಂದಿದ್ದು 55 ಸಾವಿರ ಜನರಿಗೆ ವಾಸಿಸಲು ಅವಕಾಶವಾಗುವಂತಿದೆ, ಒಟ್ಟಾರೆ ಟೋಕಿಯೋ ನ್ಯೂಸ್ಗರದ ಶೇ. 10 ರಷ್ಟು ಜನರಿಗೆ ಸಾಕಾಗುವಷ್ಟು ದೊಡ್ಡ ಕಟ್ಟಡ ಇದಾಗಲಿದೆ. * ಇಲ್ಲಿ ಸಂಪ್ರದಾಯಿಕ ನೀರಿನ ಪಂಪ್ ನ ಅಗತ್ಯವಿಲ್ಲ ಏಕೆಂದರೆ ಕಟ್ಟಡದ ಮುಂಭಾಗದಲ್ಲಿ ನೀರನ್ನು ಸಂಗ್ರಹಿಸಿ ಅದನ್ನು ಫಿಲ್ಟರ್ ಮಾಡುವ ಕಾರ್ಯ ಇಲ್ಲಿ ನಡೆಯುತ್ತದೆ. * ಈ ಕಟ್ಟಡದಲ್ಲಿ ಹಲವಾರು ಅತ್ಯಾಧುನಿಕ ಸೌಕರ್ಯಗಳು ಇರಲಿವೆ. * ಇದು ಅಡ್ಡಲಾಗಿ ಚಲಿಸಬಲ್ಲ ಕೇಬಲ್ ಮುಕ್ತ ಎಲಿವೇಟರ್ ಗಳನ್ನೂ ಅಳವಡಿಸಲಾಗುತ್ತದೆ. * ಈ ಕಟ್ಟಡದ ಮುಂಭಾಗದಲ್ಲಿ ಕೈಗಾರಿಕಾ ಮಟ್ಟದ ಕೃಷಿಗೆ ಅವಕಾಶ ಹೊಂದಿದೆ, ಟಪ್ ಲೆವೆಲ್ ನಲ್ಲಿ ಸಣ್ಣ ತೋಟಗಳನ್ನು ನಿರ್ಮಾಣ ಮಾಡಲಾಗುತ್ತಿದೆ. * ಈ ಕಟ್ಟಡವು ಒಟ್ಟಾರೆ 421 ಮಹಡಿಗಳನ್ನು ಅಳವಡಿಸಲಾಗುತ್ತದೆ.