Job Description: * 2021 ಮತ್ತು 2022 ನೇ ಸಾಲಿನ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ, ಕೊಡಮಾಡುವ "ಆದಿಕವಿ ಪುರಸ್ಕಾರ"ಕ್ಕೆ ಬಾಬು ಕೃಷ್ಣಮೂರ್ತಿ, ಪುಟ್ಟು ಕುಲಕರ್ಣಿ ಇವರುಗಳು ಆಯ್ಕೆಯಾಗಿದ್ದಾರೆ.* ಸಂಸ್ಥೆಯ ಮುಖ್ಯ ಕಾರ್ಯದರ್ಶಿ ರಘುನಂದನ್ ಭಟ್ಟರವರು ಶುಕ್ರವಾರ ಅಂದರೆ ಅಕ್ಟೋಬರ್ 7 ರಂದು ಸುದ್ದಿಗೋಷ್ಠಿಯಲ್ಲಿ 2021 ಮತ್ತು 2022 ನೇ ಸಾಲಿನ "ಆದಿಕವಿ ಪುರಸ್ಕಾರ"ಕ್ಕೆ ಬಾಬು ಕೃಷ್ಣಮೂರ್ತಿ, ಪುಟ್ಟು ಕುಲಕರ್ಣಿಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.* ಅದೇ ರೀತಿ "ವಾಗ್ದೇವಿ ಪ್ರಶಸ್ತಿ" ಗೆ ಸಂಸ್ಕೃತ ವಿದ್ವಾಂಸ ವಿಶ್ವನಾಥ್ ಸುಂಕನಾಳ ಹಾಗೂ ಬರಹಗಾರ ಚಕ್ರತೀರ್ಥ ಆಯ್ಕೆಯಾಗಿದ್ದಾರೆ ಈ ಪ್ರಶಸ್ತಿಗಳು 1 ಲಕ್ಷ ನಗದು ಹಣವನ್ನು ಹೊಂದಿವೆ ಎಂದಿದ್ದಾರೆ. * ಈ ಪ್ರಶಸ್ತಿಯನ್ನು ಅಕ್ಟೋಬರ್ 16 ರಂದು ಸಿದ್ದಗಂಗಾ ಪಿಯು ಕಾಲೇಜ್ ನಲ್ಲಿ ಕೊಡಲಾಗುತ್ತದೆ ಎಂದಿದ್ದಾರೆ.