Job Description: * ಸಾಮಾನ್ಯ ಗಡಿ ನದಿಯಾದ ಕುಶಿಯಾರದಿಂದ ಭಾರತ ಮತ್ತು ಬಾಂಗ್ಲಾದೇಶಗಳು ತಲಾ 153 ಕ್ಯೂಸೆಕ್ ನಷ್ಟು ನೀರು ಪಡೆಯುವ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟ ಅನುಮೋದಿಸಲಾಗಿದೆ. * ಭಾರತ ಗಣರಾಜ್ಯದ ಜಲ ಶಕ್ತಿ ಸಚಿವಾಲಯ ಹಾಗೂ ಬಾಂಗ್ಲಾದೇಶ ಗಣರಾಜ್ಯದ ಜಲ ಸಂಪನ್ಮೂಲ ಸಚಿವಾಲಯದ ನಡುವೆ ಸಾಮಾನ್ಯ ಗಡಿ ನದಿಯಾದ ಕುಶಿಯಾರದಿಂದ ನವೆಂಬರ್ 1 ರಿಂದ ಮೇ 31 ರ ವರೆಗೆ ಬಳಕೆಯ ನೀರಿನ ಅವಶ್ಯಕತೆಗಳಿಗಾಗಿ ತಲಾ 153 ಕ್ಯೂಸೆಕ್ ನೀರು ಪಡೆಯುವ ಕುರಿತ ತಿಳಿವಳಿಕೆಯ ಪತ್ರ [ಎಂಒಯು]ಕ್ಕೆ ಸಹಿ ಹಾಕಲಾಗಿತ್ತು.* ಒಪ್ಪಂದ ಅಸ್ಸಾಂ ಸರ್ಕಾರಕ್ಕೆ ಕುಶಿಯಾರ ನದಿಯ ಸಾಮಾನ್ಯ ವಿಸ್ತರಣೆಯಿಂದ ತಮ್ಮ ಬಳಕೆಯ ನೀರಿನ ಅವಶ್ಯಕತೆಗಳಿಗೆ ಅನುಗುಣವಾಗಿ 153 ಕ್ಯೂಸೆಕ್ ನೀರನ್ನು ಪಡೆಯುವಂತೆ ಅನೂಕೂಲ ಮಾಡಿಕೊಟ್ಟಿದೆ. * ನವೆಂಬರ್ 1 ರಿಂದ ಮೇ 31 ರ ವರೆಗೆ ನೀರು ಪಡೆಯುವ ಬಗ್ಗೆ ಈ ಎರಡು ರಾಷ್ಟ್ರಗಳ ಮೇಲೆ ನಿಗಾ ಇಡಲು ಒಂದು ಜಂಟಿ ನಿಗಾ ತಂಡವನ್ನು ರಚಿಸಲಾಗುತ್ತಿದೆ.