Job Description: * ಭಾರತೀಯ ಚಿತ್ರ ರಂಗಕ್ಕೆ ಅಪಾರ ಕೊಡುಗೆ ನೀಡಿದ ಬಾಲಿವುಡ್ ನ ಹಿರಿಯ ನಟಿ ನಿರ್ದೇಶಕಿ ನಿರ್ಮಾಪಕಿ ಆಗಿರುವ ಆಶಾ ಪಾರೇಖ್ ಅವರಿಗೆ 2020 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. * ಸೆಪ್ಟೆಂಬರ್ 30 ರಂದು ನವದೆಹಲಿಯಲ್ಲಿ ನಡೆಯಲಿರುವ 68 ನೇ ರಾಷ್ಟೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.* ಫಾಲ್ಕೆ ಪ್ರಶಸ್ತಿ ಗೆ ಆಯ್ಕೆಯಾದ ಪಾರೇಖ್ ರವರು 1942 ಅಕ್ಟೋಬರ್ 2 ರಂದು ಗುಜರಾತ್ ನಲ್ಲಿ ಜನಿಸಿದ್ದಾರೆ. ಇವರು 10 ವರ್ಷದ ವಯಸ್ಸಿದ್ದಾಗಲೇ ಬಿಮಲ್ ರಾಯ್ ಅವರ "ಮಾ" ಚಿತ್ರದಲ್ಲಿ ನಟನೆ ಮಾಡುವದರ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. * 1959 ರಲ್ಲಿ ಶಮ್ಮಿ ಕಪೂರ್ ಅವರ "ದಿಲ್ ದೇಖೇ ದೇಖೊ"ಚಿತ್ರದಲ್ಲಿ ನಾಯಕಿಯಾಗಿ ಮುಂದುವರೆದರು ಹಾಗೂ ಇನ್ನು ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. * ಸೆಂಟರ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಟ್ ಗೆ 1998 ರಿಂದ 2001 ರ ವರೆಗೆ ಮೊದಲ ಮಹಿಳಾ ಅಧ್ಯಕ್ಷ ಆಗಿದ್ದರು. * 1990 ರಲ್ಲಿ ಕೋರಾ ಕಾಗಜ್ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. * 1917 ರಲ್ಲಿ ಪಾರೇಖ್ ರವರ ಆತ್ಮಚರಿತ್ರೆ "ದಿ ಹಿಟ್ ಗರ್ಲ್" ಪ್ರಕಟವಾಗಿದೆ.