Job Description: * ಎಸ್ ಆರ್. ಲೀಲಾವತಿ ಅಧ್ಯಕ್ಷತೆ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ ಇನ್ನು ಮುಂದೆ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್ ನಲ್ಲಿ ಹಾಡಲು ಸರಕಾರ ಸಮ್ಮತಿಸಿದೆ. * 18 ವರ್ಷಗಳಿಂದ ಗೊಂದಲದಲ್ಲಿದ್ದ ನಾಡಗೀತೆಗೆ ಸೆಪ್ಟೆಂಬರ್ 23 ,2022 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ನಾಡಗೀತೆಗೆ ಆಲಾಪ ಪುನರಾವರ್ತನೆ ಪರಿಹಾರ ಒದಗಿಸಿದರು.* ನಾಡಕವಿ ಕುವೆಂಪು ಅವರು 1928 ರಲ್ಲಿ ರಚಿಸಿದ್ದ ನಾಡಗೀತೆಯನ್ನು 5 ರಿಂದ 9 ನಿಮಿಷಗಳ ಕಾಲ ಹಾಡಲಾಗುತಿತ್ತು. ಕುವೆಂಪು ಅವರ ವಾರಸುದಾರರ ಅಭಿಪ್ರಾಯ ಪಡೆದ ಸರ್ಕಾರ 2016 ರಿಂದ ಪೂರ್ಣ ಸಾಲುಗಳನ್ನು ಹಾಡಲು ನಿರ್ಧರಿಸಿತು ಆದರೆ ಇನ್ನು ಮುಂದೆ ಒಂದೇ ಧಾಟಿಯಲ್ಲಿ ಮಕ್ಕಳು ಹಾಗೂ ವೃಧ್ದರು ಕೂಡ ಒಂದಕ್ಷರ ಬಿಡದಂತೆ ನಿರರ್ಗಳವಾಗಿ ಹಾಡುವಂತೆ ಸರ್ಕಾರ ಆಯೋಜಿಸಿದೆ.