Job Description: * ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆಯವರ ಅಂತ್ಯಕ್ರಿಯೆ ಸಮಾರಂಭದಲ್ಲಿ ಇದೆ ಸೆಪ್ಟೆಂಬರ್ 27 ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. * ಸೆಪ್ಟೆಂಬರ್ 27 ಕ್ಕೆ ಅಬೆ ಅವರ ಅಂತ್ಯಕ್ರಿಯೆ ಸಮಾರಂಭ ಟೋಕಿಯೊದ ಕಿಟನುಮರು ನ್ಯಾಷನಲ್ ಗಾರ್ಡನ್ನ ನಿಪ್ಪೋನ್ ಬುಡೋಕನ್ ಪ್ರದೇಶದಲ್ಲಿ ನಡೆಯಲಿದೆ.* ಜಪಾನ್ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಉಭಯ ರಾಷ್ಟ್ರಗಳು ಅಮೆರಿಕ ಮತ್ತು ಆಸ್ಟ್ರೇಲಿಯಾ ಜತೆ ಸಮಗ್ರ ಪಾಲುದಾರಿಕೆಯ ಕ್ವಾಡ್ ಸ್ವರೂಪದಲ್ಲಿ ಎರಡೂ ದೇಶಗಳು ಸಹಕರಿಸುತ್ತವೆ. * ಜಪಾನ್‌ನ ನಾರಾ ನಗರದಲ್ಲಿ ಶಿಂಜೋ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಹಿಂದಿನಿಂದ ವ್ಯಕ್ಯಿಯೊಬ್ಬ ಪ್ರಧಾನಿಗೆ ಗುಂಡು ಹಾರಿಸಿದ್ದನು. ಇದೇ ವೇಳೆ ಅವರಿಗೆ ಹೃದಯಾಘಾತವೂ ಸಂಭವಿಸಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. * ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಜುಲೈ 8 ರಂದು ನಿಧನರಾದರು.