Job Description: * ಭಾರತದ ಪ್ರಥಮ ಜಲಜನಕ ಇಂಧನ ಕೋಶ ಬಸ್ ಅನ್ನು ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ ಆಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌ (CSIR) ಮತ್ತು ಕೆಪಿಐಟಿ ಲಿಮಿಟೆಡ್‌ (KPIT) ಜಂಟಿಯಾಗಿ ಅಭಿವೃದ್ಧಿ ಪಡಿಸಿವೆ.* ದೇಶದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಜಲಜನಕ ಇಂಧನ ಕೋಶದ ಬಸ್‌ ಪುಣೆಯಲ್ಲಿ ರಸ್ತೆಗೆ ಇಳಿದಿದೆ ಇದನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಈ ಬಸ್‌ಗೆ ಚಾಲನೆ ನೀಡಿದರು.* ಗ್ರೀನ್ ಹೈಡ್ರೋಜನ್ ಅತ್ಯುತ್ತಮವಾದ ಶುದ್ಧ ಶಕ್ತಿ ವೆಕ್ಟರ್ ಆಗಿದ್ದು, ಸಂಸ್ಕರಣಾ ಉದ್ಯಮ, ರಸಗೊಬ್ಬರ ಉದ್ಯಮ, ಉಕ್ಕಿನ ಉದ್ಯಮ, ಸಿಮೆಂಟ್ ಉದ್ಯಮ ಮತ್ತು ಭಾರೀ ವಾಣಿಜ್ಯ ಸಾರಿಗೆ ವಲಯದಿಂದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಷ್ಟಕರವಾದ ಡಿಕಾರ್ಬೊನೈಸೇಶನ್ ಅನ್ನು ಶಕ್ತಗೊಳಿಸುತ್ತದೆ.