Job Description: * ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಹೈದರಾಬಾದ್ ಹೌಸ್‌ನಲ್ಲಿ ಭೇಟಿಯಾದರು. * ಪ್ರಧಾನಿ ಹಸೀನಾ ಅವರು ಸೋಮವಾರ ನಾಲ್ಕು ದಿನಗಳ ಭಾರತ ಪ್ರವಾಸವನ್ನು ಆರಂಭಿಸಿದ್ದಾರೆ. ಮಂಗಳವಾರ ದೆಹಲಿಯ ರಾಜ್‌ಘಾಟ್‌ನಲ್ಲಿ ಪ್ರಧಾನಿ ಹಸೀನಾ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರೆ, ರಾಷ್ಟ್ರಪತಿ ಭವನದಲ್ಲಿ ಅವರು ವಿಧ್ಯುಕ್ತ ಸ್ವಾಗತವನ್ನು ಪಡೆದರು. * ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸಮ್ಮುಖದಲ್ಲಿ ಮಂಗಳವಾರ ಭಾರತ ಮತ್ತು ಬಾಂಗ್ಲಾದೇಶ ನಡುವೆ ಏಳು ಒಪ್ಪಂದಗಳಿಗೆ ಸಹಿ ಹಾಕಲಾಯಿತು. * ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಉಭಯ ರಾಷ್ಟ್ರಗಳ ನಿಯೋಗ ಮಟ್ಟದ ಮಾತುಕತೆಯಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಯಿತು. * ಸಂಪರ್ಕ, ಇಂಧನ, ಜಲ ಸಂಪನ್ಮೂಲಗಳು, ವ್ಯಾಪಾರ ಮತ್ತು ಹೂಡಿಕೆ, ಗಡಿ ನಿರ್ವಹಣೆ ಮತ್ತು ಭದ್ರತೆ, ಅಭಿವೃದ್ಧಿ ಪಾಲುದಾರರು ಮತ್ತು ಪ್ರಾದೇಶಿಕ ಬಹುಪಕ್ಷೀಯ ವಿಷಯಗಳ ಕುರಿತು ಮಾತುಕತೆಯ ವೇಳೆ ಚರ್ಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. * ಭಯೋತ್ಪಾದನೆಯ ವಿಷಯದ ಬಗ್ಗೆ ಚರ್ಚಿಸಲಾಯಿತು ಮತ್ತು ವಿರೋಧಿ ಶಕ್ತಿಗಳನ್ನು ಎದುರಿಸಲು ಒತ್ತು ನೀಡಲಾಯಿತು. ವಿರೋಧಿ ಶಕ್ತಿಗಳನ್ನು ಜಪಾನ್ ಮತ್ತು ಭಾರತ ಒಟ್ಟಾಗಿ ಎದುರಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ * ಈ ಚರ್ಚೆ ಮತ್ತು ಒಪ್ಪಂದಗಳ ಫಲಿತಾಂಶವು ಎರಡೂ ದೇಶಗಳ ಜನರಿಗೆ ಪ್ರಯೋಜನವಾಗಲಿದೆ. ನಾವು ನಿಕಟ ಸ್ನೇಹ ಮತ್ತು ಸಹಕಾರದಿಂದ ಸಭೆ ನಡೆಸಿದ್ದೇವೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಿಳಿಸಿದ್ದಾರೆ