Job Description: * ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಬ್ರಿಟನ್‌ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. * 2015 ರ ಚುನಾವಣೆಯ ನಂತರ ಲಿಜ್‌ ಟ್ರಸ್‌ ಅವರು ಕನ್ಸರ್ವೇಟಿವ್‌ ಪಕ್ಷದ ನಾಲ್ಕನೇ ಪ್ರಧಾನಮಂತ್ರಿ ಎಂಬುದು ವಿಶೇಷ.* "ಮುಂದಿನ ಎರಡು ವರ್ಷಗಳಲ್ಲಿ ನಾವು ಫಲಿತಾಂಶಗಳನ್ನು ನೀಡಲಿದ್ದೇವೆ ಎಂದು ತೋರಿಸಬೇಕಾಗಿದೆ. ತೆರಿಗೆಗಳನ್ನು ಕಡಿತಗೊಳಿಸಲು ಮತ್ತು ನಮ್ಮ ಆರ್ಥಿಕತೆಯನ್ನು ಬೆಳೆಸಲು ನಾನು ದಿಟ್ಟ ಯೋಜನೆಯನ್ನು ನೀಡುತ್ತೇನೆ,” ಎಂದು ಲಿಜ್‌ ಟ್ರಸ್‌ ಹೇಳಿದರು.* ಲಿಜ್‌ ಟ್ರಸ್‌ ಬ್ರಿಟನ್‌ ಮೂರನೇ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಹಿಂದೆ ಮಾರ್ಗರೇಟ್‌ ಥ್ಯಾಚರ್‌, ಥೆರೆಸಾ ಮೇ ಈ ಹುದ್ದೆ ಅಲಂಕರಿಸಿದ್ದರು.