Job Description: * ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬ್ರಿಯಾನ್ ಲಾರಾ ಈಗ ಮುಖ್ಯ ಕೋಚ್ ಆಗಿ ತಂಡದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.* 2023ರ ಐಪಿಎಲ್ಗೋಸ್ಕರ ಈಗಾಗಲೇ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಮ್ಮ ಕೋಚ್ ಬದಲಾವಣೆ ಮಾಡಿದ್ದು, ಆ ಪಟ್ಟಿಗೆ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಕೂಡ ಸೇರ್ಪಡೆಯಾಗಿದೆ.* ಬ್ರಿಯಾನ್ ಲಾರಾ ವೆಸ್ಟ್ ಇಂಡೀಸ್ ಹಾಗೂ ವಿಶ್ವ ಕಂಡಿರುವ ಅಪ್ರತಿಮ ಬ್ಯಾಟಿಂಗ್ ದಿಗ್ಗಜರಾಗಿದ್ದು, ತಂಡದ ಪರ 131 ಟೆಸ್ಟ್ ಹಾಗೂ 299 ಏಕದಿನ ಪಂದ್ಯಗಳನ್ನಾಡಿದ್ದಾರೆ.