Job Description: * ಪ್ರತಿ ವರ್ಷ ಆಗಸ್ಟ್‌ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ.* " ಒಂದು ಚಿತ್ರ ಸಾವಿರ ಪದಗಳಿಗೆ ಸಮ". ಪದಗಳಲ್ಲಿ ವರ್ಣಿಸಲಸಾಧ್ಯವಾದ ಅದೇಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ಬಿಡಿಸುತ್ತದೆ ಎಂಬಂಥ ಮಾತುಗಳು ತಿಳಿಸುತ್ತದೆ.* ಈ ದಿನದ ಮುಖ್ಯ ಉದ್ದೇಶವು ಹೆಚ್ಚು ಹೆಚ್ಚು ಛಾಯಾಗ್ರಾಹಕರು, ಪರಿಣಿತರನ್ನು ಬೆಳೆಸುವುದು ಮತ್ತು ಕಲೆ ಮತ್ತು ತಂತ್ರಜ್ಞಾನದ ಉತ್ತಮ ಮಿಶ್ರಣವಾಗಿರುವ ವೃತ್ತಿಯ ವಿಚಾರ ವಿನಿಮಯಮಾಡಿಕೊಳ್ಳುವುದಾಗಿದೆ.* ವಿಶ್ವ ಛಾಯಾಗ್ರಹಣ ದಿನವನ್ನು 1939 ರ ಆಗಸ್ಟ್ 19 ರಂದು ಫ್ರಾನ್ಸ್‌ ದೇಶದಲ್ಲಿ ಮೊದಲ ಬಾರಿಗೆ ವಿಶ್ವ ಛಾಯಾಗ್ರಹಣ ದಿನವನ್ನು ಘೋಷಿಸಲಾಯಿತು.* 2010 ರಲ್ಲಿ ಆಗಸ್ಟ್ 19 ರಂದು ವಿಶ್ವ ಮಟ್ಟದಲ್ಲಿ ಭಾರತವು ಸೇರಿದಂತೆ ಅಂದಾಜು 100 ದೇಶಗಳಲ್ಲಿ ಆನ್‌ಲೈನ್‌ ಗ್ಯಾಲರಿಗಳು ಮೊದಲ ಛಾಯಾಗ್ರಹಣ ದಿನವನ್ನು ಆಚರಿಸಿತು. * 'ಫೋಟೋಗ್ರಫಿ' ಎಂಬುದು ಗ್ರೀಕ್‌ ಭಾಷೆಯ ಪದ. 'ಪೋಸ್‌' ಎಂದರೆ ಬೆಳಕು, 'ಗ್ರಾಫಿಯಿನ್‌' ಎಂದರೆ ಬೆಳಕಿನಿಂದ ಬರೆದದ್ದು ಛಾಯಾಗ್ರಹಣ.* ಈ ಛಾಯಾಗ್ರಹಣ ಎಂಬ ಪದವನ್ನು ಮೊದಲ ಬಾರಿಗೆ ಆವಿಷ್ಕರಿಸಿದವರು ಸರ್‌ ಜಾನ್‌ ಹರ್ಷೆಲ್‌. ಜಾರ್ಜ್‌ ಈಸ್ಟ್‌ಮನ್‌, ಹಿಪೊಲೈಟ್‌ ಬೇಯರ್ಡ್‌, ಹರ್ಬರ್ಟ್‌ ಬೋಯರ್‌ ಬಕ್ರ್ಲಿ, ಫ್ರೆಡ್ರಿಕ್‌ ಲಾಂಮ್‌ಮೊದಲಾದವರ ಶ್ರಮವೇ ಇಂದಿನ ಆಧುನಿಕ ಕ್ಯಾಮೆರಾಗಳು.* ಈ ಛಾಯಾಗ್ರಹಣ ದಿನದ ಹುಟ್ಟು ಎಂದರೆ 'ಡೆಗೋರಿಯೋ' ಮಾದರಿಯ ಕ್ಯಾಮೆರಾ ಆವಿಷ್ಕಾರಗೊಂಡ ದಿನವೇ ಆಗಿದೆ, ಲೂಯಿಸ್‌ ಡೆಗೋರಿಯೋ ಎಂಬ ವ್ಯೆಕ್ತಿ ತನ್ನ ಸತತ ಪರಿಶ್ರಮದ ಫಲವಾಗಿ 'ಕ್ರೂಡ್‌ಕ್ಯಾಮೆರಾ' ಕಂಡು ಹಿಡಿದರು.* 1839 ರಲ್ಲಿಯ ವಿಲಿಯಮ್‌ ಫಾಕ್ಸ್‌ ಟಾಲ್‌ಬಾಟ್‌ ಎಂಬುವವರು 'ಕ್ಯಾಲೋಟೈಪ್‌' ಕ್ಯಾಮೆರಾ ಸಂಶೋಧಿಸಿದ.* 'ಡೆಗೋರಿಯೋ ಟೈಪ್‌' ಮತ್ತು 'ಕ್ಯಾಲೋ ಟೆಪ್‌' ಎರಡೂ ಛಾಯಾಗ್ರಹಣ ಪರಿಕರಗಳನ್ನು ಇಬ್ಬರು ಅತೃಪ್ತ ಅನ್ವೇಷಕರು 1839 ರಲ್ಲಿ ಕಂಡು ಹಿಡಿದ ಸವಿ ನೆನಪಿಗಾಗಿ ಪ್ರತಿ ವರ್ಷ ಆ.19 ಅನ್ನು ವಿಶ್ವಛಾಯಾಗ್ರಹಣ ದಿನವನ್ನಾಗಿ ಆಚರಿಸಲಾಗುತ್ತದೆ.