Job Description: * ಆಗಸ್ಟ್ 24 ರಂದು ಉಕ್ರೇನ್‌ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ. * ಆಗಸ್ಟ್ 24 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿರುವ ಉಕ್ರೇನ್‌ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕು ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಎಚ್ಚರಿಕೆ ನೀಡಿದ್ದಾರೆ.* ಉಕ್ರೇನ್‌ -ರಷ್ಯಾ ಸೇನಾಪಡೆಗಳ ನಡುವೆ ದಾಳಿ ಮುಂದುವರಿದಿದ್ದು, ನಾಗರಿಕರು ಆತಂಕದಲ್ಲೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.* ಇತ್ತೀಚೆಗೆ ಕೇಂದ್ರ ಉಕ್ರೇನ್‌ನ ಡಿನಿಪ್ರೊಪೆಟ್ರೊವ್‌ಸ್ಕ್‌ ಪ್ರದೇಶದಲ್ಲಿ ರಷ್ಯಾ ನಡೆಸಿದ ರಾಕೆಟ್‌ ದಾಳಿಯಲ್ಲಿ 13 ಮಂದಿ ನಾಗರಿಕರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದರು.* ಈ ಎಲ್ಲ ಬೆಳವಣಿಗೆಗಳ ನಡುವೆ ಉಕ್ರೇನ್‌ ಸೇನೆಯು, ರಷ್ಯಾದ ವಿರುದ್ಧ ಪ್ರತಿ ದಾಳಿ ಮುಂದುವರಿಸಿದೆ.