Job Description: * ರಕ್ಷಣಾ ಸಚಿವ ರಮಾನಾಥ ಸಿಂಗ್ ಅವರು ಭಾರತೀಯ ಸೇನೆಗೆ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಹಸ್ತಾಂತತರಿಸಿದರು ಅವು ಲಡಾಖ್‌ನಲ್ಲಿ ಬಳಸಬಹುದಾದ ಕ್ಷಿಪ್ರ ಪ್ರತಿಕ್ರಿಯಾತ್ಮಕ ವಾಹನಗಳು ಸೇರಿದಂತೆ ವಿಶಾಲ ಶ್ರೇಣಿಯ ಶಸ್ತ್ರಾಸ್ತ್ರಗಳಾಗಿವೆ.* ಕಣ್ಣಾವಲು ಸೇವೆಗೆ ಬಳಸುವ ಹಾರ್ಡ್‌ವೇರ್, ಗಸ್ತು ದೋಣಿಗಳು, ಸಂಚಾರ ಗಸ್ತು ವಾಹನಗಳು, ಸ್ವಯಚಾಲಿತ ಸಂವಹನಾ ವ್ಯವಸ್ಥೆ, ಮೇಲ್ದರ್ಜೆಗೆ ಏರಿಸಲಾದ ದೂರದರ್ಶಕವ್ಯವಸ್ಥೆ, ಅತ್ಯಾಧುನಿಕ ಥರ್ಮಲ್ ಇಮೇಜರ್ಸ್‌ ಇತರ ಶಸ್ತ್ರಾಸ್ತ್ರಗಳಾಗಿವೆ. * ಗಡಿಯಲ್ಲಿ ಎರಡೂ ವರ್ಷಗಳಿಂದ ಇರುವ ಚೀನಾ ಜೊತೆಗಿನ ಸಂಘರ್ಷದ ಸ್ಥಿತಿ ಹಿನ್ನೆಲೆಯಲ್ಲಿ ಯಾವುದೇ ಸ್ಥಿತಿ ಎದುರಿಸಲು ಸೇನೆಯನ್ನು ಸಜ್ಜುಗೊಳಿಸುವುದರ ಭಾಗವಾಗಿ ಈಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಲಾಯಿತು.* 134 ಕಿ.ಮೀ. ಉದ್ದವಿರುವ ಈ ಸರೋವರವನ್ನು ಆಯಕಟ್ಟಿನ ಸ್ಥಳ ಎಂದು ಗುರುತಿಸಲಾಗಿದೆ.* ಸೇನೆಯು ಕಳೆದ ವರ್ಷ 12 ಎಲ್‌ಸಿಎ ಬೋಟ್‌ಗಳ ಖರೀದಿ ಪ್ರಕ್ರಿಯೆ ಆರಂಭಿಸಿತ್ತು.* ಪಶ್ಚಿಮ ಇರಬಹುದು ಅಥವಾ ಅತಿ ಎತ್ತರದ ಪ್ರದೇಶಗಳಾದ ಲಡಾಖ್ ಇರಬಹುದು, ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ಸೇನೆ ಸಿದ್ಧವಾಗಿದೆ.