Job Description: * 2016 ರಲ್ಲಿ ಸಿದ್ದರಾಮಯ್ಯ ನೇತ್ರತ್ವದ ಸರ್ಕಾರ ಜಾರಿಗೆ ತಂದಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಹೈಕೋರ್ಟ್ ರದ್ದುಗೊಳಿಸಿದೆ.* ಭ್ರಷ್ಟಾಚಾರ ನಿಗ್ರಹ ದಳದ ವಿಷಯಕ್ಕೆ ತೀರ್ಪು ಕೊಟ್ಟಿರುವ ಹೈಕೋರ್ಟ್ ಕರ್ನಾಟಕ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದೆ. * ಭಷ್ಟ್ರಾಚಾರ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಇರುವ ಪ್ರಿವೆನ್ಶನ್ ಆಫ್ ಕರೆಫ್ಶನ್ ಆಕ್ಟ್ 1988 ಕರ್ನಾಟಕ ಲೋಕಾಯುಕ್ತ Act 1984 ವ್ಯಾಪ್ತಿಯಲ್ಲಿ ಬರುತ್ತಿದೆ. * ಆದರೆ ಈ ಸಂಬಂಧ ಕರ್ನಾಟಕ ಸರ್ಕಾರ ಎಸಿಬಿ ರಚನೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.* ಲೋಕಾಯುಕ್ತಕ್ಕೆ ಮತ್ತೆ ಹಳೆ ಪವರ್ ನೀಡಿರುವ ಹೈಕೋರ್ಟ್ ಎಸಿಬಿಯಲ್ಲಿರುವ ಎಲ್ಲಾ ಕೇಸ್ಗಳನ್ನು ಹಾಗೂ ಸ್ಟಾಪ್ಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ತಿಳಿಸಿದೆ. * ಈಗಾಗಲೇ ಕೈಗೊಂಡ ಕ್ರಮಗಳು ಮುಂದುವರಿಯಲಿದೆ ಎಂದು ತಿಳಿಸಿದೆ.* ಜಸ್ಟೀಸ್ ಬಿ. ವೀರಪ್ಪ ಹಾಗೂ ಕೆ.ಎಸ್ ಹೇಮಲೇಖಾ ನೇತೃತ್ವದ ಪೀಠ ಈ ತೀರ್ಪು ಪ್ರಕಟಿಸಿದ್ದು, ಈ ಸಂಬಂಧ ಚಿದಾನಂದ ಅರಸ್ ಎಂಬವರು ಹೈಕೋರ್ಟ್ಗೆ ಪ್ರತ್ಯೇಕ ಪಿಐಎಲ್ ಸಲ್ಲಿಸಿದ್ದರು. * ಮಾರ್ಚ್ 14, 2016 ರಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಸಿಬಿ ಜಾರಿಗೆ ತಂದಿತ್ತು.