Job Description: * ಪ್ರತೀ ವರ್ಷ ವಿಶ್ವ ಸಿಂಹ ದಿನವನ್ನು ಆಗಸ್ಟ್ 10 ರಂದು ಆಚರಿಸಲಾಗುತ್ತದೆ.* ಆಗಸ್ಟ್‌ 10 ವಿಶ್ವ ಸಿಂಹಗಳ ದಿನ ಸಿಂಹಗಳ ರಕ್ಷಣೆಗೆ ನಾವೆಲ್ಲಾ ಸಿದ್ಧರಾಗಬೇಕಿದೆ. * ಅರಣ್ಯ ನಾಶಕ್ಕೆ ಕಡಿವಾಣ ಹಾಕಿ ಪ್ರಾಣಿಗಳ ಸಹಜ ಆವಾಸ ಸ್ಥಾನವನ್ನು ರಕ್ಷಿಸುವ ಕೆಲಸ ಮಾನವರದಾಗಿದೆ * ಏಷ್ಯಾಟಿಕ್ ಸಿಂಹವು ಭಾರತದಲ್ಲಿ ಅತಿ ಹೆಚ್ಚು ಗುರುತಿಸಲ್ಪಟ್ಟಿದೆ.* ಭಾರತದಲ್ಲಿ ಏಷ್ಯಾಟಿಕ್ ಸಿಂಹಗಳು ಹೆಚ್ಚಾಗಿ ನಿರ್ಬಂಧಿತ ಗಿರ್ ಅರಣ್ಯದಲ್ಲಿ ಮತ್ತು ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡು ಬರುತ್ತವೆ.* ಭಾರತದಲ್ಲಿ 2015 ರ ಗಣತಿಯ ಪ್ರಕಾರ 523 ಸಿಂಹಗಳು ಹಾಗೂ 2020 ರಲ್ಲಿ ನಡೆದ ಗಣತಿಯ ಪ್ರಕಾರ 674 ಸಿಂಹಗಳು ಗುರಿತಿಸಲ್ಪಟ್ಟಿದೆ.* ಇತ್ತೀಚಿನ ಸಮೀಕ್ಷೆಯ ಪ್ರಕಾರ ಐತಿಹಾಸಿಕವಾಗಿ ಸಿಂಹಗಳ ಸಂಖ್ಯೆಯು 30,000 ದಿಂದ 20,000 ಕ್ಕೆ ಇಳಿಕೆಯಾಗಿದೆ ಎಂಬುದು ತಿಳಿದು ಬಂದಿದೆ.* ಭಾರತ ಸರ್ಕಾರ ಸಿಂಹಗಳನ್ನು ರಕ್ಷಣೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅರಣ್ಯದ ನಾಶ, ಅತಿಯಾದ ಬೇಟೆಯಿಂದಾಗಿ ಕಾಡಿನಲ್ಲಿ ಒಂಟಿಯಾಗಿ ಅಲೆಯುವ ಸಿಂಹಗಳಘರ್ಜನೆ ಕ್ಷೀಣಿಸುತ್ತಿದೆ. ಜತೆಗೆ ಸಿಂಹಗಳ ಸಂಖ್ಯೆಯಲ್ಲಿ ಕ್ರಮೇಣ ಇಳಿಕೆ ಕಂಡು ಬರುತ್ತಿದೆ.