Job Description: * ತಮಿಳುನಾಡಿನ ಮಹಾಬಲೀಪುರದಲ್ಲಿ ನಡೆದ 44 ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಮಹಿಳೆಯರ ಎ ತಂಡ ಮತ್ತು ಪುರುಷರ ಬಿ ತಂಡ ಎರಡು ತಂಡಗಳಿಗೆ ಕಂಚಿನ ಪದಕಗಳು ಜಯಿಸಿವೆ. * ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳಲ್ಲಿರುವ ಆಟಗಾರರಾದ ಡಿ ಗುಕೇಶ್ , ಆರ್ ಪ್ರಗ್ನಾನಂದ , ನಿಹಾಲ್ ಸರಿನ್, ರೌನಕ್ ಸಾಧ್ವನಿ, ಬಿ ಅಧಿಬನ್ ಮತ್ತು ಕೊನೇರು ಹಂಪಿ, ಆರ್ ವೈಶಾಲಿ ಭಾರತಕ್ಕಾಗಿ ಪದಕ ತಂದುಕೊಟ್ಟ ಸ್ಪರ್ಧಿಗಳು. * ಭಾರತೀಯ ಮಹಿಳೆಯರ-ಎ ತಂಡವು 11 ನೇ ಪಂದ್ಯದಲ್ಲಿ ಯುಎಸ್ ವಿರುದ್ಧ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.* ಮಹಿಳೆಯರಿಗೆ ಇದು ಮೊದಲ ಒಲಿಂಪಿಯಾಡ್ ಪದಕವಾಗಿದೆ. * ಉಜ್ಬೇಕಿಸ್ತಾನ್ ತಂಡಕ್ಕೆ ಚಿನ್ನದ ಪದಕ ಒಲಿಯಿತು.* ಮತ್ತೊಂದೆಡೆ ಭಾರತ-ಎ USA ವಿರುದ್ಧ ಡ್ರಾ ಸಾಧಿಸಿ ನಾಲ್ಕನೇ ಸ್ಥಾನಗಳಿಸುವ ಮೂಲಕ ಕಂಚಿನ ಪದಕ ತನ್ನದಾಗಿಸಿಕೊಂಡಿತು.* ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಇದು ಎರಡನೇ ಕಂಚಿನ ಪದಕವಾಗಿದೆ.