Job Description: * ಕೊಲಂಬಿಯಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌‌ನಲ್ಲಿ ಬೆಳ್ಳಿ ಗೆದ್ದ ಪ್ರಿಯಾ ಮೋಹನ್, ಭರತ್ ಶ್ರೀಧರ್, ರೂಪಾಲ್‌ ಚೌಧರಿ ಮತ್ತು ಕಪಿಲ್ ಒಳಗೊಂಡ ಭಾರತ ರಿಲೇ ತಂಡವು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು. * ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಪ್ರಿಯಾ ಮೋಹನ್ ಅವರಿಗೆ 5 ಲಕ್ಷ ರೂ. ನಗದು ಪುರಸ್ಕಾರ ನೀಡುವುದಾಗಿ ಸಚಿವ ಡಾ. ಕೆ. ಸಿ. ನಾರಾಯಣಗೌಡ ಅವರು ಘೋಷಿಸಿದ್ದಾರೆ.* ಈ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌‌ನಲ್ಲಿ ಅಮೇರಿಕ ಚಿನ್ನವನು ಗೆದ್ದರೆ, ಜಮೈಕಾ ಕಂಚು ಗೆದ್ದುಕೊಂಡಿತ್ತು. * ಈ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌‌ನಲ್ಲಿ ಇದೆ ತಂಡ ಕಳೆದ ವರ್ಷ ಕಂಚಿನ ಪದಕವನ್ನು ಗೆದ್ದುಕೊಂಡಿತ್ತು.