Job Description: * ಭಾರತವು 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೆ, 3 ಚಿನ್ನ, 2 ಬೆಳ್ಳಿ ಮತ್ತು 1 ಕಂಚು ಸೇರಿದಂತೆ 6 ಪದಕಗಳನ್ನು ಗೆದ್ದಿದೆ. * ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಪಡೆದಿದ್ದಾರೆ ಹಾಗೂ ಜೆರೆಮಿ ಲಾಲ್ರಿನ್ನುಂಗ ಎರಡನೇ ಚಿನ್ನದ ಪದಕವನ್ನು ಪಡೆದಿದ್ದಾರೆ ಅದೇ ತೆರನಾಗಿ ಅಚಿಂತಾ ಶೆಯುಲಿ ಭಾರತಕ್ಕೆ ಮೂರನೇ ಚಿನ್ನದ ಪದಕವನ್ನು ಪಡೆದಿದ್ದಾರೆ. * ಜೆರೆಮಿ ಲಾಲ್ರಿನ್ನುಂಗಾ ಅವರು 300 ಕೆಜಿ (ಸ್ನ್ಯಾಚ್‌ನಲ್ಲಿ 140 ಕೆಜಿ + ಸಿ & ಜೆನಲ್ಲಿ 160 ಕೆಜಿ) ಎತ್ತಿದರು, ಕಾಮನ್‌ವೆಲ್ತ್ ಗೇಮ್‌ಗಳಲ್ಲಿ ದಾಖಲೆ ಮಾಡಿದರು. * ವೇಟ್‌ಲಿಫ್ಟಿಂಗ್‌ನ 67 ಕೆಜಿ ವಿಭಾಗದಲ್ಲಿ ಅವರು ಪದಕ ಗೆದ್ದರು. * ಮೀರಾಬಾಯಿ ಚಾನು ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದರು. * ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅವರು ಒಟ್ಟು 201 ಕೆಜಿ ಎತ್ತಿದರು. * ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಅಚಿಂತಾ ಶೆಯುಲಿ 313 ಕೆಜಿ ಭಾರ ಎತ್ತುವ ಮೂಲಕ ಚಿನ್ನ ಗೆದ್ದರು. * ಪುರುಷರ 55 ಕೆಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಂಕೇತ್ ಸರ್ಗರ್ ಬೆಳ್ಳಿ ಪದಕ ಗೆದ್ದಿದ್ದಾರೆ. * ಮಹಿಳೆಯರ 55 ಕೆಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕ ಪಡೆದರು. * ಪುರುಷರ 61 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಗುರುರಾಜ ಪೂಜಾರಿ ಭಾರತದ ಏಕೈಕ ಕಂಚಿನ ಪದಕವನ್ನು ಪಡೆದರು. * ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಕ್ರಿಕೆಟ್ ; ಭಾರತ ಮಹಿಳಾ ಟಿ20 ತಂಡ ಪಾಕಿಸ್ತಾನ ವಿರುದ್ಧ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಅಜೇಯ ಅರ್ಧಶತಕ ಬಾರಿಸಿದರು. * ಬಾಕ್ಸಿಂಗ್‌ನಲ್ಲಿ, ನಿಖತ್ ಜರೀನ್ ಮಹಿಳೆಯರ 48 ಕೆಜಿ-50 ಕೆಜಿ (ಲೈಟ್ ಫ್ಲೈ) ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. * ಭಾರತದ ಪುರುಷರ ಹಾಕಿ ತಂಡವು ಗ್ರೂಪ್ ಬಿ ಪೂಲ್‌ನ ತನ್ನ ಮೊದಲ ಪಂದ್ಯದಲ್ಲಿ ಘಾನಾ ವಿರುದ್ಧ 11-0 ಅಂತರದಿಂದ ಗೆದ್ದಿದೆ.