Job Description: * ಕಳೆದ 3 ವರ್ಷಗಳಲ್ಲಿ ಭಾರತದಲ್ಲಿ 329 ಹುಲಿಗಳು ಕಳೆದುಹೋಗಿವೆ. ಕಳ್ಳಬೇಟೆ ಮತ್ತು ಇತರ ನೈಸರ್ಗಿಕ ಅಥವಾ ಅಸ್ವಾಭಾವಿಕ ಕಾರಣಗಳೇ ಇದಕ್ಕೆ ಕಾರಣವಾಗಿದೆ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಹುಲಿಗಳ ಕುರಿತು ಅಂಕಿಅಂಶಗಳನ್ನು ಮಂಡಿಸಿದರು. ಅವರ ಹೇಳಿಕೆ ಪ್ರಕಾರ, ಹುಲಿಗಳ ಕುರಿತ ಸಚಿವಾಲಯದ ಡೇಟಾದ ಮುಖ್ಯಾಂಶಗಳು : - * 2019 ರಲ್ಲಿ ಭಾರತವು 96 ಹುಲಿಗಳನ್ನು ಕಳೆದುಕೊಂಡಿತ್ತು; 2020 ರಲ್ಲಿ, ಇದು 106 ಹುಲಿಗಳನ್ನು ಕಳೆದುಕೊಂಡಿದ್ದರೆ, 2021 ರಲ್ಲಿ 127 ಹುಲಿಗಳನ್ನು ಕಳೆದುಕೊಂಡಿದೆ. * 329 ಸಾವುಗಳಲ್ಲಿ 68 ಹುಲಿಗಳು ನೈಸರ್ಗಿಕ ಕಾರಣಗಳಿಂದ, 5 ಅಸ್ವಾಭಾವಿಕ ಕಾರಣಗಳಿಂದ, 29 ಬೇಟೆಯಿಂದ ಮತ್ತು 30 ರೋಗಗ್ರಸ್ತವಾಗುವಿಕೆಯಿಂದ ಸಾವನ್ನಪ್ಪಿವೆ. * ಸದ್ಯಕ್ಕೆ 97 ಹುಲಿಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. * * ಸಚಿವಾಲಯದ ಮಾಹಿತಿ ಅನ್ವಯ ಆನೆಗಳ ಮಾಹಿತಿ : - * ಬೇಟೆ, ವಿಷಪ್ರಾಶನ, ರೈಲು ಅಪಘಾತಗಳು ಮತ್ತು ವಿದ್ಯುದಾಘಾತದಿಂದಾಗಿ ಭಾರತವು ಇದೇ ಅವಧಿಯಲ್ಲಿ 307 ಆನೆಗಳನ್ನು ಕಳೆದುಕೊಂಡಿದೆ. * ಮೂರು ವರ್ಷಗಳಲ್ಲಿ 222 ಆನೆಗಳು ವಿದ್ಯುತ್ ಸ್ಪರ್ಶದಿಂದ ಪ್ರಾಣ ಕಳೆದುಕೊಂಡಿವೆ. * ಒಡಿಶಾದಲ್ಲಿ 41, ತಮಿಳುನಾಡಿನಲ್ಲಿ 34 ಮತ್ತು ಅಸ್ಸಾಂನಲ್ಲಿ 33 ಪ್ರಕರಣಗಳು ವರದಿಯಾಗಿವೆ. * ರೈಲು ಅಪಘಾತದಲ್ಲಿ 45 ಆನೆಗಳು ಸಾವನ್ನಪ್ಪಿವೆ. * ಒಡಿಶಾದಲ್ಲಿ 12 ಮತ್ತು ಪಶ್ಚಿಮ ಬಂಗಾಳದಲ್ಲಿ 11 ರೈಲು ಸಾವುಗಳು ವರದಿಯಾಗಿವೆ. * ಬೇಟೆಗೆ 29 ಆನೆಗಳು ಪ್ರಾಣ ಕಳೆದುಕೊಂಡಿವೆ. ಈ ಸಂಖ್ಯೆಯ ಹೊರಗೆ; ಮೇಘಾಲಯದಲ್ಲಿ 12 ಮತ್ತು ಒಡಿಶಾದಲ್ಲಿ 7 ಸಾವುಗಳು ಸಂಭವಿಸಿವೆ. * ವಿಷ ಸೇವಿಸಿ 11 ಆನೆಗಳು ಸಾವನ್ನಪ್ಪಿದ್ದು, ಅದರಲ್ಲಿ 9 ಆನೆಗಳು ಅಸ್ಸಾಂನಲ್ಲಿ ಸಂಭವಿಸಿವೆ. * * ಮಾನವ-ಪ್ರಾಣಿಗಳ ನಡುವಿನ ಸಂಘರ್ಷವನ್ನು ನೋಡುವದಾದ್ರೆ : - * ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ "ಹುಲಿ ದಾಳಿ" ಯಲ್ಲಿ 125 ಜನರು ಸಾವನ್ನಪ್ಪಿದ್ದಾರೆ. * ಮಹಾರಾಷ್ಟ್ರದಲ್ಲಿ 61 ಮತ್ತು ಉತ್ತರ ಪ್ರದೇಶದಲ್ಲಿ 25 ಸಾವುಗಳು ಸಂಭವಿಸಿವೆ.