Job Description: * ಭಾರತವು ತನ್ನ ಅತಿದೊಡ್ಡ 5ಜಿ ತರಂಗಾಂತರ ಹರಾಜನ್ನು ಪ್ರಕ್ರಿಯೆಯಲ್ಲಿ ಮೊದಲ ದಿನ 1.45 ಲಕ್ಷ ಕೋಟಿ ಬಿಡ್ ಗಳು ಸಲ್ಲಿಕೆಯಾಗಿವೆ.* ರಿಲಯನ್ಸ್ ಜಿಯೋ, ಭಾರತಿ ಏರ್‌ಟೆಲ್, ವಡಾಪೋನ್ ಐಡಿಯಾ, ಅದಾನಿ ಎಂಟರ್‌ಪ್ರೈಸಸ್ ಮತ್ತು 5G ತರಂಗಾಂತರಕ್ಕಾಗಿ ಬಿಡ್ ಮಾಡಲು ಸಿದ್ಧವಾಗಿವೆ.* ಬಿಲಿಯನೇರ್‌ಗಳಾದ ಮುಕೇಶ್ ಅಂಬಾನಿ, ಸುನಿಲ್ ಭಾರ್ತಿ, ಮತ್ತು ಗೌತಮ್ ಅದಾನಿ ಸೇರಿ ಹಲವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.* ಸ್ಥಳೀಯ ರೇಟಿಂಗ್ ಕಂಪನಿ ಐಸಿಆರ್‌ಎನ್‌ ಲಿ.ನ ಜೂನ್ ಅಂದಾಜಿನ ಪ್ರಕಾರ ತರಂಗಾಂತರಗಳ ಹರಾಜಿನಿಂದ ಕೇಂದ್ರ ಸರಕಾರ 1.1 ಲಕ್ಷ ಕೋಟಿ ರೂ. (14 ಬಿಲಿಯನ್‌ ಡಾಲರ್‌) ಸಂಗ್ರಹಿಸುವ ನಿರೀಕ್ಷೆ ಇದೆ.* 5ಜಿ ನೆವೆಗಳು 4ಜಿ ಸೇವೆಗಳಿಗಿಂತ ಹತ್ತು ಪಟ್ಟು ಹೆಚ್ಚು ವೇಗದ ಇಂಟರ್ ನೆಟ್ ಅನ್ನು ಹೊಂದಿದೆ * ದೂರ ಸಂಪರ್ಕ ಸಚಿವ ಅಶ್ವಿನ ಹೇಳಿಕೆ ಪ್ರಕಾರ 2015 ರ ದಾಖಲೆಯನ್ನು ಇದು ಮುರಿದಿದೆ ಎಂದು ಹೇಳಿದ್ದಾರೆ. * ಸೆಪ್ಟೆಂಬರ್ ವೇಳೆಗೆ 5ಜಿ ಸೇವೆಗೆಳ ನಿರೀಕ್ಷೆ ಇದೆ * ಸೆಪ್ಟೆಂಬರ್ ವೇಳೆಗೆ 5ಜಿ ಸೇವೆಗೆಳನ್ನು ಅಗಸ್ಟಾ 14 ಕ್ಕೆ ಮೊದಲ ಹಂಚಿಕ್ಕೆ ಮಾಡಲಾಗುತ್ತದೆ, ಸೆಪ್ಟೆಂಬರ್ ವೇಳೆಗೆ ಶುರುವಾಗುವ ನಿರೀಕ್ಷೆ ಇದೆ * ದೇಶದಲ್ಲೇ ಮೊದಲ ಬಾರಿಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್)ದ ಪೈಲಟ್ ಪ್ರಾಜೆಕ್ಟ್‌ನ ಅಡಿಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ 5ಜಿ ನೆಟ್‌ವರ್ಕ್ ಅನ್ನು ಪರೀಕ್ಷಿಸಿದೆ. ಈ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮ ದೇಶದಲ್ಲೇ 5ಜಿ ನೆಟ್‌ವರ್ಕ್ ಪರೀಕ್ಷಿಸಿದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.* ಬೆಂಗಳೂರಿನ ನಮ್ಮ ಮೆಟ್ರೋ 5ಜಿ ನೆಟ್‌ವರ್ಕ್ ಅನ್ನು ಪರೀಕ್ಷಿಸಿದೆ. ನಮ್ಮ ಮೆಟ್ರೋ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಇದು 4ಜಿ ನೆಟ್‌ವರ್ಕ್‌ಗಿಂತಲೂ 50 ಪಟ್ಟು ವೇಗದ ಇಂಟರ್‌ನೆಟ್ ಒದಗಿಸುತ್ತದೆ ಎಂದು ತಿಳಿಸಿದೆ