Job Description: * ಡಿವೈನ್ ಟೈಡ್ಸ್‌ ಸಂಗೀತ ಅಲ್ಬಂಗೆ ಖ್ಯಾತ ಗಾಯಕ ರಿಕಿ ಕೇಜ್, ವನಿಲ್ ವೇಗಸ್ ಹಾಗೂ ಪಿ.ಎ.ದೀಪಕ್ ಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.* ಈ ಪ್ರಶಸ್ತಿಯನ್ನು ಏಪ್ರಿಲ್ 4 ರಂದು ಪ್ರಕಟಿಸಲಾಗಿತ್ತು ರಿಕಿ ಅವರು ಈ ಪ್ರಶಸ್ತಿಯನ್ನು ಲಾಸ್‌ವೇಗಸ್‌ನಲ್ಲಿ ಸ್ವೀಕರಿಸಿದ್ದರು ಹಾಗೆ ಇತ್ತೀಚೆಗೆ ವನಿಲ್ ಅವರಿಗೆ ಗ್ರ್ಯಾಮಿ ಟ್ರೋಫಿಯು ಅವರಿಗೆ ಸಿಕ್ಕಿದೆ.* ಈ ಪ್ರಶಸ್ತಿಯು ವನಿಲ್ ಅವರಿಗೆ ಬೆಸ್ಟ್ ನ್ಯೂ ಏಜ್ ನ ವಿಭಾಗದಲ್ಲಿ ಈ ಆಲ್ಬಂನ ಧ್ವನಿ ವಿನ್ಯಾಸಕ್ಕೆ ಈ ಟ್ರೋಫಿಯನ್ನು ನೀಡಲಾಗಿದೆ.* ರಿಕಿ ಅವರಿಗೆ 2015 ರಲ್ಲಿ ಈ ಪ್ರಶಸ್ತಿಯು ವಿಂಡ್ಸ್ ಆಫ್ ಸಂಸಾರ ' ಅಲ್ಬಂ ಗೆ ಸಿಕ್ಕಿತ್ತು ಹಾಗೂ ಈ ಗ್ರ್ಯಾಮಿ ಪ್ರಶಸ್ತಿಯು ಕರ್ನಾಟಕಕ್ಕೆ ಎರಡನೇ ಪ್ರಶಸ್ತಿ ಯಾಗಿದ್ದೆ ಎಂದು ತಿಳಿಸಿದ್ದಾರೆ.* ಮಂಗಳೂರಿನವರಾದ ವನಿಲ್ ರವರು ಕೀಬೋರ್ಡ್ ವಾದಕರಾಗಿ 2000 ರಲ್ಲಿ ಸಂಗೀತ ಕ್ಷೇತ್ರವನ್ನು ಸೇರಿಕೊಂಡಿದ್ದರು ಹಾಗೂ ಹಲವಾರು ತಂಡಗಳಲ್ಲಿ ಕೀಬೋರ್ಡ್ ವಾದಕರಾಗಿದ್ದರು ಅದಲ್ಲದೆ ಸಂಗೀತ ನಿರ್ದೇಶಕರಾಗಿಯು ಗುರುತಿಸಿಕೊಂಡಿದ್ದಾರೆ.* ಇವರು ಕನ್ನಡದ ಚಿತ್ರಗಳಲ್ಲಿ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ, ಆ್ಯಕ್ಸಿಡೆಂಟ್, ವೆಂಕಟ ಇನ್ ಸಂಕಟ, ಕ್ರೇಜಿ ಕುಟುಂಬ ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.* ಅಮೇರಿಕ ಅಲ್ಲದೆ ವಿವಿಧ ದೇಶಗಳಲ್ಲಿ ಸಂಗೀತ ಯೋಜನೆಗಳಿಗೆ ಕೆಲಸವನ್ನು ಮಾಡುತ್ತಿದ್ದಾರೆ.