Job Description: * ಏಷ್ಯನ್ ಯೂತ್ ಮತ್ತು ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಯುವ ವೇಟ್ ಲಿಫ್ಟರ್ ಹರ್ಷದಾ ಶರದ್ ಗರುಡ ಅವರು ತಾಷ್ಕೆಂಟ್ ನಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಚಿನ್ನವನ್ನು ಗೆದ್ದರು.* ಇವರು ಮಹಿಳೆಯರ 45 ಕೆ.ಜಿ. ವಿಭಾಗದಲ್ಲಿ ಒಟ್ಟು 157 ಕೆ.ಜಿ ಭಾರವನ್ನು ಎತ್ತಿ ಅಗ್ರ ಸ್ಥಾನವನ್ನು ಪಡೆದುಕೊಂಡರು ಇವರು ಜೂನಿಯರ್‌ ವಿಶ್ವಚಾಂಪಿಯನ್‌ಷಿಪ್‌ ಮೇ ತಿಂಗಳಲ್ಲಿ ನಡೆದಿತ್ತು ಅದರಲ್ಲಿ ಇವರು ಚಿನ್ನದ ಪದಕವನ್ನು ಜಯಸಿದ್ದರು.* ಜೂನಿಯರ್‌ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಹರ್ಷದಾ ಅವರು 153 ಕೆ.ಜಿ ಭಾರವನ್ನು ಎತ್ತಿದ್ದರು ಆದರೆ ಈ ಸ್ಪರ್ಧೆಯಲ್ಲಿ ಅವರು 4ಕೆ.ಜಿಯಷ್ಟು ಅಧಿಕ ಭಾರವನ್ನು ಎತ್ತಿದ್ದಾರೆ.* 45 ಕೆ.ಜಿ. ಯೂತ್ ವಿಭಾಗದಲ್ಲಿ ಭಾರತದ ಸೌಮ್ಯಾದಳವಿ ಅವರು ಕಂಚನ್ನು ಜಯಸಿದರು ಇವರು ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಇವರು 145 ಕೆ.ಜಿ ಭಾರವನ್ನು ಎತ್ತುವ ಮೂಲಕ ಕಂಚನ್ನು ಗೆದಿದ್ದರು.* ಎಲ್.ಧನುಷ್ ರವರು ಪುರುಷರ 49 ಕೆ.ಜಿ. ಯೂತ್ ವಿಭಾಗದ ಸ್ನ್ಯಾಚ್ ನಲ್ಲಿ 85 ಕೆ.ಜಿ ಭಾರವನ್ನು ಎತ್ತಿ ಕಂಚನ್ನು ಜಯಸಿದರು ಇವರು ಒಟ್ಟಾರೆ 185 ಕೆ.ಜಿ. ಭಾರವನ್ನು ಎತ್ತಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರು.* ಈ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟಾರೆಯಾಗಿ ಸ್ನ್ಯಾಚ್, ಕ್ಲೀನ್ ಮತ್ತು ಜರ್ಕ್ ಸ್ಪರ್ಧೆಗಳಿಗೆ ಬೇರೆ ಬೇರೆ ಪದಕಗಳನ್ನು ನೀಡಲಾಗುತ್ತದೆ.