Job Description: * *ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಸಂಜೀವ ರಜಪೂತ್ , ಚೈನ್ ಸಿಂಗ್ ಮತ್ತು ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಅವರನ್ನೊಳಗೊಂಡ ಭಾರತ ಪುರುಷ ತಂಡವು ಬೆಳ್ಳಿ ಪದಕವನ್ನು ಜಯಸಿತು.* ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಭಾರತದ ಶೂಟರ್‌ಗಳಿಗೆ ಟೂರ್ನಿಯ 50 ಮೀಟರ್ಸ್ ರೈಫಲ್ ತ್ರೀ ಪೊಸಿಷನ್ಸ್ ನ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿದರು.* ಫೈನಲ್ ಪಂದ್ಯದಲ್ಲಿ ಭಾರತ ತಂಡದವರು ಜೆಕ್ ಗಣರಾಜ್ಯದ ಪೀಟರ್ ನಿಂಬರ್‌ಸ್ಕಿ,ಫಿಲಿಪ್ ನೆಪೆಚಾಲ್,ಮತ್ತು ಜಿರಿ ಪ್ರಿವ್ರಟ್ ಸ್ಕಿ ಎದುರು 12-16ರಿಂದ ಸೋತರು.* ಅಂಜುಮ್ ಮೌದ್ಗೀಲ್ ರವರಿಗೆ ಮಹಿಳೆಯರ 50 ಮೀಟರ್ಸ್ ರೈಫಲ್ ತ್ರೀ ಪೊಸಿಷನ್ಸ್ ವೈಯಕ್ತಿಕ ವಿಭಾಗದಲ್ಲಿ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ ಫೈನಲ್ ಸುತ್ತಿನಲ್ಲಿ ಅಂಜುಮ್ ರವರು 402 .9 ಅಂಕವನ್ನು ಗಳಸಿದರು.* ಜರ್ಮನಿಯ ಅನ್ನಾ ಜಾನ್ಸೆನ್ ( 407.7 ಅಂಕ ) ಚಿನ್ನ ಮತ್ತು ಇಟಲಿಯ ಬಾರ್ಬರಾ ಗ್ಯಾಂಬರೋ ( 403.4 ಅಂಕ ) ದಿಂದ ಬೆಳ್ಳಿ ಗಳಿಸಿದರು.* ಇದು ಅಂಜುಮ್ ಅವರಿಗೆ ಸತತ ಎರಡನೇ ವಿಶ್ವ ಕಪ್ ಪದಕವಾಗಿದೆ ಕಳೆದ ತಿಂಗಳು ಬಾಕುವಿನಲ್ಲಿ ನಡೆದ ಟೋರ್ನಿಯಲ್ಲಿ ಬೆಳ್ಳಿ ಪದಕವನ್ನು ಜಯಸಿದ್ದಾರೆ.* ಸದ್ಯ ಭಾರತವು 11 ಪದಕಗಳೊಂದಿಗೆ ಚಿನ್ನ, 5 ಬೆಳ್ಳಿ, ಎರಡು ಕಂಚುಗಳನ್ನೂ ಪಡೆದುಕೊಂಡು ಅಗ್ರ ಸ್ಥಾನದಲ್ಲಿ ಇದೆ.