Job Description: * ಕೃಷಿ ಜಮೀನು ಬೆಲೆ ಸೂಚ್ಯಂಕವನ್ನು ಅಹಮದಾಬಾದ್ ನ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂಎ) ಯು ಅಭಿವೃದ್ಧಿಪಡಿಸಿದೆ ಇದಕ್ಕಾಗಿ ಕೃಷಿ ಜಮೀನಿನ ಇ - ಮಾರ್ಕೆಟ್ ಪ್ಲೇಸ್ ಎಸ್ ಫಾರ್ಮ್ಸ್ ಇಂಡಿಯಾ ಸಂಸ್ಥೆ ಯೊಂದಿಗೆ ಕೈಜೋಡಿಸಲಾಗಿದೆ.* ಈ ಸೂಚ್ಯಂಕವನ್ನು ಎಸ್‌ಫಾರ್ಮ್‌ ವೇದಿಕೆಯಲ್ಲಿ ನಡೆದ ಕೃಷಿ ಜಮೀನು ಮಾರಾಟ ಮತ್ತು ಖರೀದಿಯನ್ನು ಆಧರಿಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಹಾಗು ಈ ಸೂಚ್ಯಂಕವನ್ನು ವಿನ್ಯಾಸಗೊಳಿಸಲಾಗಿದ್ದು ಭಾರತದಲ್ಲಿ ಕೃಷಿ ಜಮೀನಿನ ಬೆಲೆಗಳ ಗುಣಮಟ್ಟ ನಿಯಂತ್ರಿತ ದತ್ತಾಂಶ ದಾಖಲಿಸಲು ಹಾಗೂ ಪ್ರಸ್ತುತಪಡಿಸಲು ಸಾಧ್ಯವಾಗಿದೆ.* ಈ ಸೂಚ್ಯಂಕವು ಆನ್‌ಲೈನ್ ಮಾರುಕಟ್ಟೆ ವೇದಿಕೆಯಾದ ಎಸ್‌ಫಾರ್ಮ್‌ಇಂಡಿಯಾದಲ್ಲಿ ದಾಖಲಾಗುವ ಬೆಲೆಗಳ ಏರುಪೇರುಗಳನ್ನು ಈ ಸೂಚ್ಯಂಕ ಟ್ರ್ಯಾಕ್ ಮಾಡುತ್ತಿದೆ ಇದರ ಆಧಾರದಲ್ಲಿ ಮಾಸಿಕ ಸಂಯುಕ್ತ ಬೆಲೆ ವ್ಯವಸ್ಥೆಯನ್ನು ಪ್ರಕಟಿಸುತ್ತದೆ.* ಪೈಲಟ್ ಆಧಾರದಲ್ಲಿ ಕರ್ನಾಟಕ ಮಾತ್ರವಲ್ಲದೆ ಆಂಧ್ರ ಪ್ರದೇಶ , ತಮಿಳುನಾಡು,ಮಹಾರಾಷ್ಟ್ರ,ಉತ್ತರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸೂಚ್ಯಂಕವನ್ನು ಆರಂಭಿಸಲಾಗಿದೆ ಬೇರೆ ರಾಜ್ಯಗಳಿಂದ ದತ್ತಾಂಶ ಗಳನ್ನು ನಿರೀಕ್ಷಿಸಲಾಗುತ್ತಿದೆ ಅವುಗಳು ಬಂದ ಮೇಲೆ ಸೇರ್ಪಡೆ ಮಾಡಲಾಗುತ್ತದೆ.* ಈ ಸೂಚ್ಯಂಕವು ದೇಶದ ಅರೆ - ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೆಂಚ್‌ಮಾರ್ಕ್ ಭೂಮಿ ವಿಶ್ವಾಸಾರ್ಹ ಮೂಲವಾಗಲಿದೆ ಇದು ರಿಯಲ್ ಎಸ್ಟೇಟ್ ಜಮೀನಾಗಿ ಕೃಷಿ ಜಮೀನನ್ನು ಪರಿವರ್ತಿಸಲು ಅದು ನೆರವಾಗಲಿದೆ.* ಸ್ಥಳೀಯ ಸರ್ಕಾರಗಳು ಹೆದ್ದಾರಿ ವಿಸ್ತರಣೆ ಯೋಜನೆಗಳಲ್ಲಿ ಜಮೀನು ಕಳೆದು ಕೊಂಡವರಿಗೆ ಪರಿಹಾರ ನೀಡುವ ವಿಚಾರದಲ್ಲಿ ಈ ಸೂಚ್ಯಂಕವನ್ನು ಬಳಸಿಕೊಳ್ಳಬಹುದಾಗಿದೆ.* ಈ ಸೂಚ್ಯಂಕವು ಸ್ಥಳೀಯ ಸರ್ಕಾರಗಳು , ನೀತಿ ನಿರೂಪಕರು , ಹೂಡಿಕೆದಾರರು , ಪರಿಸರವಾದಿಗಳು , ಸಾಲ ನೀಡಿಕೆದಾರರು ( ಫೈನಾನ್ನಿಯರ್ಸ್ ) , ರಿಯಲ್ ಎಸ್ಟೇಟ್ ಅಭಿವೃದ್ಧಿದಾರರು ಮುಂತಾದ ಹಲವು ವಿಭಾಗದವರಿಗೆ ಇದು ಸಹಾಯಕಾರಿಯಾಗಲಿದೆ.* ಇದು ಅಪಡೇಟ್ ಗಳನ್ನು 2 ವರ್ಷಗಳಿಗೊಮ್ಮೆ ನೀಡುತ್ತದೆ ಇದು 2 ವರ್ಷಗಳಿಗೊಮ್ಮೆ ಸಕಾಲಿಕಗೊಳಿಸುತ್ತದೆ ಹಾಗು ಅಧೀಕೃತ ವೆಬ್ ಸೈಟ್ ಐಐಎಂ - ಅಹಮದಾಬಾದ್‌ನ ಮಿಶ್ರಾ ಸೆಂಟರ್ ಫಾರ್ ಫೈನಾನ್ಶಿಯಲ್ ಮಾರ್ಕೆಟ್ಸ್ ಅಂಡ್ ಎಕಾನಮಿ ಅಡಿಯಲ್ಲಿ ಕೃಷಿ ಭೂಮಿ ಬೆಲೆ ಸೂಚ್ಯಂಕವನ್ನು ಆರಂಭಿಸಲಾಗಿದ್ದು ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.* ಇದಕ್ಕೆ ಐಐಎಂ - ಅಹಮದಾಬಾದ್ ಎಸ್‌ಫಾರ್ಮ್‌ ಇಂಡಿಯಾ ಲ್ಯಾಂಡ್ ಪ್ರೈಸ್ ಇಂಡೆಕ್ಸ್ ( ಐಎಸ್‌ಎಎಲ್‌ಪಿಐ )ಎಂದು ಇದಕ್ಕೆ ನಾಮಕರಣ ಮಾಡಲಾಗಿದೆ.* ಆನ್ ಲೈನ್ ಮಾರ್ಕೆಟ್ ಪ್ಲೇಸ್‌ನಲ್ಲಿ ನಮೂದಾದ ದರಗಳನ್ನು ಮಾತ್ರವೇ ಸಂಶೋಧನೆಯ ಉದ್ದೇಶಕ್ಕೆ ಮೂಲ ಬೆಲೆಯಾಗಿ ಪರಿಗಣಿಸಲಾಗುತ್ತದೆ ಹಾಗು ಈ ಸೂಚ್ಯಂಕವು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಮಾರ್ಗದರ್ಶಿ ದರಗಳಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ.