Job Description: * ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಈ ವಾರ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ ಅವರು ಭಾರತ , ಇಸ್ರೇಲ್ ಹಾಗೂ ಯುಎಇ ನಾಯಕರೊಂದಿಗೆ 'ಐ2ಯು2' ಸಂಘಟನೆಯ ಮೊದಲ ವರ್ಚುವಲ್ ಶೃಂಗಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.* ಅಧ್ಯಕ್ಷ ಬೈಡನ್ ರವರು ಪಶ್ಚಿಮ ಏಷ್ಯಾ ರಾಷ್ಟ್ರಗಳ ಪ್ರವಾಸವನ್ನು ಜುಲೈ 13 ರಿಂದ 16 ರ ವರೆಗೆ ಕೈಗೊಂಡಿದ್ದಾರೆ ಹಾಗು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ರವರು ಐ2ಯು2 ದ ಮೊದಲ ಶೃಂಗಸಭೆ ಗುರುವಾರ ನಡೆಯಲಿದೆ ಎಂದು ತಿಳಿಸಿದ್ದಾರೆ.* ಜಾಗತಿಕವಾಗಿ ಆಹಾರ ಮತ್ತು ಇಂಧನ ಸಮಸ್ಯೆಯು ಉಕ್ರೇನ್ - ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಕಂಡುಬಂದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ರವರು ತಿಳಿಸಿದ್ದಾರೆ ಹಾಗು ಅವರು ಶೃಂಗಸಭೆಯಲ್ಲಿ ಹೆಚ್ಚು ಒತ್ತನ್ನು ಆಹಾರ ಭದ್ರತೆ ಕುರಿತ ಚರ್ಚೆಗೆ ನೀಡಲಾಗುತ್ತದೆ ಎಂದರು.* ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿ,ಇಸ್ರೇಲ್ ಪ್ರಧಾನಿ ಯಾಯಿರ್ ಲಾಪಿಡ್ ಹಾಗು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರೊಂದಿಗೆ ಸಭೆ ನಡೆಸುವರು ಎಂದು ತಿಳಿಸಿದ್ದಾರೆ.* ಇಲ್ಲಿ ಐ2 ಯು2 ಎಂದರೆ ನಾಲ್ಕು ರಾಷ್ಟ್ರಗಳ ಸಂಘಟನೆಯೇ ಆಗಿದೆ ಇಲ್ಲಿ 'ಐ' ಎಂಬುದು ಭಾರತ ಹಾಗೂ ಇಸ್ರೇಲ್ ಅನ್ನು ಸೂಚಿಸಿದರೆ , ' ಯು ' ಎಂಬುದು ಅಮೆರಿಕ ಹಾಗೂ ಸಂಯುಕ್ತ ಅರಬ್ ಸಂಸ್ಥಾನಗಳನ್ನು(ಯುಎಇ) ಯನ್ನು ಸೂಚಿಸುತ್ತದೆ.