Job Description: * ಕೇಂದ್ರ ಸರ್ಕಾರವು ಹೊಸ ವೇತನ ಸಂಹಿತೆಯನ್ನು ಜುಲೈ 1 ರಿಂದ ಜಾರಿಗೊಳಿಸುವ ಸಾಧ್ಯತೆ ಇದೆ.* ಕೇಂದ್ರ ಸರ್ಕಾರವು ವಾರದಲ್ಲಿ ನಾಲ್ವೇ ದಿನ ಕೆಲಸ , ವೇತನ , ಕೆಲಸದ ಅವಧಿ , ಭವಿಷ್ಯ ನಿಧಿ ( ಪಿಎಫ್ ) , ಗ್ರಾಚ್ಯುಟಿಯನ್ನು ಬದಲಾಯಿಸಲಾಗುತ್ತದೆ ಎಂದು ತಿಳಿಯಬಹುದಾಗಿದೆ.ಆದರೆ ಈ ಕುರಿತು ಸರ್ಕಾರ ಇನ್ನೂ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ.* 2021 ಏಪ್ರಿಲ್ 1 ರಿಂದ ಹೊಸ ವೇತನ ಸಂಹಿತೆ ಜಾರಿಗೆ ಬರಲಿದೆ ಎಂದು ಹೇಳಲಾಗಿತ್ತು ನಂತರ ಅಕ್ಟೋಬರ್‌ನಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದರು ಈಗ ಮತ್ತೆ ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.* 2019 ರ ಅಡಿಯ ಹೊಸ ವೇತನ ಸಂಹಿತೆಯಲ್ಲಿ ಟೇಕ್ ಹೋಮ್ ಸಂಬಳದಲ್ಲಿ ಕಡಿತ ಇರಲಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.* 2019 ರ ವೇಜ್ ಕೋಡ್ ಆಕ್ಟ್ ಪ್ರಕಾರ ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ ( ಸಿಟಿಸಿ ) ಶೇ . 50 ಕ್ಕಿಂತ ಕಡಿಮೆ ಇರುವಂತಿಲ್ಲ ಎಂದು ಹೇಳಿದೆ.* ಪಿಎಫ್ ಅನ್ನು ಲೆಕ್ಕ ಹಾಕುವಾಗ ಮೂಲವೇತನದ ಶೇಕಡಾವಾರು ಎಂದು ತೆಗೆದುಕೊಳ್ಳಲಾಗುತ್ತದೆ ಇದರಿಂದ ಮೂಲವೇತನ ಹೆಚ್ಚಳದಿಂದ ಪಿಎಫ್ ಸಹ ಏರಿಕೆ ಆಗಲಿದೆ.* ಹೊಸ ವೇತನ ಸಂಹಿತೆಯು ಜಾರಿಗೆ ಬಂದರೆ ಉದ್ಯೋಗಿಗಳು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಬೇಕು ಹಾಗು ದಿನಕ್ಕೆ 12 ಗಂಟೆ ಕಾಲ ಕೆಲಸ ಮಾಡಬೇಕಾಗುತ್ತದೆ 48 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ.* ಸದ್ಯದ ಮೂಲವೇತನ ಎಚ್ ಆರ್ ಎ ಬೋನಸ್ ಮತ್ತು ಕೆಲವೊಂದನ್ನು ತೆಗೆದರೆ ಇತರ ಭತ್ಯೆ ಗಳು ತೆರಿಗೆ ವ್ಯಾಪ್ತಿಗೆ ಬರುದಿಲ್ಲ.* ಈ ನಿಯಮ ಜಾರಿಗೆ ಬಂದರೆ ವೇತನ ಸಂಹಿತೆಯಿಂದ ಉದ್ಯೋಗಿಗಳು 300 ರಜೆಗಳನ್ನು ತೆಗೆದುಕೊಳ್ಳಬಹುದು.