Job Description: * ನೀತಿ ಆಯೋಗದ ನೂತನ ಸಿಇಒ ಆಗಿ ಪರಮೇಶ್ವರನ್‌ ಅಯ್ಯರ್‌ ಅವರನ್ನು ಕೇಂದ್ರ ಸರಕಾರ ನೇಮಕ ಮಾಡಿತ್ತು.* ಅಯ್ಯರ್‌ ಅವರು ಎರಡು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ.* ಪ್ರಸ್ತುತ ಸಿಇಒ ಅಮಿತಾಭ್‌ ಕಾಂತ್‌ ಅವರ ಅಧಿಕಾರವಧಿ ಜೂ. 30ಕ್ಕೆ ಕೊನೆಗೊಳ್ಳಲಿದೆ. ನಂತರ ಅಯ್ಯರ್‌ ಅಧಿಕಾರ ಸ್ವೀಕರಿಸಲಿದ್ದಾರೆ. ರಮೇಶ್ವರನ್‌ ಅಯ್ಯರ್‌ ಅವರ ಐಎಎಸ್‌ ಅಧಿಕಾರಿಯಾಗಿ ನಿವೃತ್ತ ಹೊಂದಿದ್ದಾರೆ.* ಅಮಿತಾಭ್‌ ಕಾಂತ್‌ ಫೆ. 17, 2016 ರಂದು ನೀತಿ ಆಯೋಗದ ಸಿಇಒ ಆಗಿ ನೇಮಕವಾಗಿದ್ದರು. ತದನಂತರ ಜೂನ್‌ 30, 2019 ರವರೆಗೂ ಅವರ ಅಧಿಕಾರವಧಿಯನ್ನು ವಿಸ್ತರಿಸಲಾಗಿತ್ತು. 2019 ಜೂ. 30 ರಂದು ಮತ್ತೆ ಎರಡು ವರ್ಷ ಅಧಿಕಾರವಧಿ ವಿಸ್ತರಣೆಗೊಂಡಿತ್ತು. ಜೂನ್‌ 2021ರಲ್ಲಿ ಮತ್ತೆ ಒಂದು ವರ್ಷ ಕಾಲ ಕಾಂತ್‌ ಅವರ ಅಧಿಕಾರಾವಧಿಯನ್ನು ವಿಸ್ತರಣೆ ಮಾಡಲಾಗಿತ್ತು.* ಅಯ್ಯರ್‌ ಅವರು 17 ವರ್ಷಗಳ ಕಾಲ ಐಎಎಸ್‌ ಅಧಿಕಾರಿಯಾಗಿ ವಿವಿಧ ಇಲಾಖೆಗಳು ಮತ್ತು ಶ್ರೇಣಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ* 2016 ರಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ (ಡಿಒಡಿಡಬ್ಲ್ಯೂಎಸ್‌) ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಜು. 2020 ರಲ್ಲಿ, ಅವರು ತಮ್ಮ ಈ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ವಿಶ್ವ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಅಮೆರಿಕಕ್ಕೆ ತೆರಳಿದ್ದರು.* ಇದಕ್ಕೂ ಮುನ್ನ, ಏಪ್ರಿಲ್‌ 1998 ಮತ್ತು ಫೆ. 2006 ರ ನಡುವೆ ವಿಶ್ವಸಂಸ್ಥೆಯಲ್ಲಿ ಹಿರಿಯ ಗ್ರಾಮೀಣ ನೀರು ನೈರ್ಮಲ್ಯ ತಜ್ಞರಾಗಿ ಕೆಲಸ ಮಾಡಿದ್ದಾರೆ. ಅಯ್ಯರ್‌ ಅವರು ಉತ್ತರ ಪ್ರದೇಶದ ಮಾಯಾವತಿ ಸರಕಾರದಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು.