Job Description: * ಇಸ್ರೋ ನಿರ್ಮಿತ ಉಪಗ್ರಹವನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್‌) ತನ್ನ ಉಪಗ್ರಹ ಮಿಷನ್‌ನಲ್ಲಿ ಜಿಸ್ಯಾಟ್‌ - 24 (GSAT-24) ಉಪಗ್ರಹವನ್ನು ಉಡಾವಣೆ ಮಾಡಿದೆ. * ಉಪಗ್ರಹದ ಸಂಪೂರ್ಣ ಸಾಮರ್ಥ್ಯವನ್ನು ಡೈರೆಕ್ಟ್-ಟು-ಹೋಮ್ (ಡಿಟಿಎಚ್‌) ಸೇವಾ ಪೂರೈಕೆದಾರ ಸಂಸ್ಥೆ 'ಟಾಟಾ ಪ್ಲೇ' ಗುತ್ತಿಗೆಗೆ ಪಡೆದುಕೊಂಡಿದೆ. * ಎನ್‌ಎಸ್‌ಐಎಲ್‌ಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಉಪಗ್ರಹವನ್ನು ನಿರ್ಮಿಸಿದೆ. * ಫ್ರೆಂಚ್ ಗಯಾನಾದ (ದಕ್ಷಿಣ ಅಮೆರಿಕಾ) ಕೌರೌದಿಂದ ಫ್ರೆಂಚ್ ಕಂಪನಿ ಏರಿಯನ್‌ಸ್ಪೇಸ್‌ ನಿರ್ವಹಿಸುವ ಏರಿಯನ್ 5 ರಾಕೆಟ್ ಮೂಲಕ ಈ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ಗುರುವಾರ ಯಶಸ್ವಿಯಾಗಿ ಸೇರಿಸಲಾಯಿತು. * ಉಪಗ್ರಹಗಳ ನಿರ್ಮಾಣ, ಉಡಾವಣೆ, ಮಾಲಿಕತ್ವ, ನಿರ್ವಹಣೆ ಮತ್ತು ಬದ್ಧ ಗ್ರಾಹಕರಿಗೆ ಅದರ ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಎನ್‌ಎಸ್‌ಐಎಲ್‌ ಹೊಂದಿದೆ. * "ಏರಿಯನ್‌ 5 ಯಶಸ್ವಿಯಾಗಿ ಎರಡು ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಯಲ್ಲಿ ಇರಿಸಿದೆ. ಮಲೇಷಿಯಾದ ಮಿಸ್ಯಾಟ್‌ ಮತ್ತು ಜಿಸ್ಯಾಟ್‌-24ನ್ನು ಕಕ್ಷೆಗೆ ಸೇರಿಸಲಾಗಿದೆ,” ಎಂದು ಏರಿಯನ್‌ಸ್ಪೇಸ್‌ ಉಡಾವಣೆ ಬಳಿಕ ಹೇಳಿಕೆ ನೀಡಿದೆ. * ಉಪಗ್ರಹ ಕಕ್ಷೆಗೆ ಹೋದ ನಂತರ ಈ ಉಪಗ್ರಹದ ಸಾಮರ್ಥ್ಯವನ್ನು ಅತ್ಯಂತ ಪರಿಣಾಮಕಾರಿ ಬಳಸಿಕೊಳ್ಳಲು ಸಾಧ್ಯವಾಗಲಿದೆ,” ಎಂದು ಎನ್ಎಸ್ಐಎಲ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. * "ಈ ಹಿಂದೆ ಇದು ಪೂರೈಕೆ ಚಾಲಿತವಾಗಿತ್ತು. ಉಡಾವಣೆಯ ನಂತರ ಸಾಮರ್ಥ್ಯವನ್ನು ಗುತ್ತಿಗೆಗೆ ನೀಡಲಾಗುತ್ತಿತ್ತು. ಇಲ್ಲಿ ಗ್ರಾಹಕರಿಗೆ ಮುಂಚಿತವಾಗಿ ಯಾವುದೇ ದೃಢವಾದ ಬದ್ಧತೆಯಿರಲಿಲ್ಲ,” ಎಂದು ಅಧಿಕಾರಿ ವಿವರಿಸಿದ್ದಾರೆ. * "ಸಂಪೂರ್ಣ ಮಿಷನ್‌ಗೆ ಎನ್‌ಎಸ್‌ಐಎಲ್‌ ಹಣ ಪಾವತಿಸಿದೆ. ಉಪಗ್ರಹ, ಉಡಾವಣೆ, ಉಡಾವಣಾ ಅಭಿಯಾನ, ವಿಮೆ, ಸಾರಿಗೆ, ಕಕ್ಷೆಯೊಳಗಿನ ನಿರ್ವಹಣೆ ಮತ್ತು ಬೆಂಬಲದ ಜವಾಬ್ದಾರಿ ಸಂಸ್ಥೆಯದ್ದಾಗಿದೆ. ಒಮ್ಮೆ ಉಪಗ್ರಹವು ಕಕ್ಷೆಗೆ ಬಂದರೆ, ಇದರ ಸಂಪೂರ್ಣ ಮಾಲಿಕತ್ವ ಎನ್‌ಎಸ್‌ಐಎಲ್‌ನದ್ದಾಗಲಿದ್ದು, ಸಂಸ್ಥೆಯೇ ಇದನ್ನು ನಿರ್ವಹಿಸುತ್ತದೆ,” ಎಂದು ಎನ್‌ಎಸ್‌ಐಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣನ್ ದುರೈರಾಜ್ ತಿಳಿಸಿದ್ದಾರೆ.