Job Description: * ಸಿಂಗಾಪುರ ರಾಷ್ಟ್ರೀಯ ಈಜು ಚಾಂಪಿಯನ್ ಶಿಪ್ ನಲ್ಲಿ ಶ್ರೀ ಹರಿ ನಟರಾಜನ್ ಮತ್ತು ಮಾನಾ ಪಟೇಲ್ ಇವರು ಚಿನ್ನದ ಪದಕ ಜಯಿಸಿದರು.* ಭಾರತಕ್ಕೆ ಮೊದಲ ದಿನ ಐದು ಪದಕಗಳು ಒಲಿದವು.* ಕನ್ನಡಿಗ ಶ್ರೀ ಹರಿಯು 100 ಮೀಟರ್ಸ್ ಬ್ಯಾಕ್ ಸ್ಟ್ರೋಕ್ ನಲ್ಲಿ 55 .32 ಸೆಕೆಂಡ್ ತೆಗೆದುಕೊಂಡು ಪ್ರಥಮ ಸ್ಥಾನವನ್ನು ಗಳಿಸಿದರು, ಹಾಗು ಶಿವ ಶ್ರೀಧರ್ ರವರು ಕಂಚಿನ ಪದಕವನ್ನು ಜಯಸಿದರು.* ಮಹಿಳೆಯರ ಚಾಂಪಿಯನ್ ಶಿಪ್ ನಲ್ಲಿ ಮಾನಾ ಪಟೇಲ್ 1 ನಿಮಿಷ 447 ಸೆಕೆಂಡ್ ತೆಗೆದುಕೊಂಡು ಭಾರತಕ್ಕೆ ಬೆಳ್ಳಿ ಪದಕವನ್ನು ತಂದು ಕೊಟ್ಟಳು.* ಶ್ರೀ ಹರಿಯು ಟೋಕಿಯೋ ಒಲಂಪಿಕ್ಸ್ ಅರ್ಹತೆ ಪಡೆದ ಭಾರತದ ಅತಿ ಕಿರಿಯ ಈಜುಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ .* ಬಟರ್ ಫ್ಲೈನ 50 ಮೀಟರ್ ನಲ್ಲಿ ಮಿಹೀರ್ ಅಂಬ್ರೆ ರವರು 24.66 ಸೆಕೆಂಡ್ ತೆಗೆದುಕೊಂಡರೆ ಫ್ರೀ ಸ್ಟೈಲ್ ನ 800 ಮೀಟರ್ ನಲ್ಲಿ ಅನೀಶ ಗೌಡರವರು 8 ನಿಮಿಷ 14.08 ಸೆಕೆಂಡ್ ತೆಗೆದುಕೊಂಡು ಚಿನ್ನದ ಪದಕ ಗೆದ್ದರು.