Job Description: * ಬೃಹತ್ ಆಮೆ ತಳಿಯು 2019 ರಲ್ಲಿ ಪತ್ತೆಯಾಗಿತ್ತು. ಬಹಳ ಹಿಂದೆಯೇ ವಿನಾಶ ಹೊಂದಿದೆ ಎಂದು ನಂಬಲಾಗಿತ್ತು.* ಗಲಪಾಗೋಸ್ ತಳಿಯ ಆಮೆ ಎಂಬುದು ಈಗ ತಿಳಿದು ಬಂದಿದೆ. ಈ ಬೃಹತ್ ತಳಿಯ ಆಮೆಯನ್ನು ಫರ್ನಾಂಡ ಎಂದು ಕರೆಯಲಾಗುತ್ತದೆ.* ವಾಸಸ್ಥಾನವು ಫರ್ನಾಂಡಿನ ಆಗಿದ್ದರಿಂದ ಫರ್ನಾಂಡ ಹೆಸರನ್ನು ನಾಮಕರಣ ಮಾಡಲಾಗಿದೆ.* ಗಲಪಗೋಸ್ ದ್ವೀಪಗಳು ಈಕ್ವೆಡಾರ್ ಗಣರಾಜ್ಯದ ಭಾಗವಾಗಿದೆ ಮತ್ತು ಜ್ವಾಲಾಮುಖಿ ದ್ವೀಪಗಳ ಸಮೂಹವಾಗಿದೆ. 1906 ರಲ್ಲಿ ಪತ್ತೆಯಾಗಿದ್ದ ಈ ಪ್ರಭೇದದ ಆಮೆಯು ಅಳಿದು ಹೋಗಿದೆ ಎಂದು ನಂಬಲಾಗಿತ್ತು.* ಆದರೆ 2019 ರ ಫೆಬ್ರುವರಿಯಲ್ಲಿ ಫರ್ನಾಂಡಿನ ದ್ವೀಪದಲ್ಲಿ ಒಂದು ಹೆಣ್ಣು ಆಮೆ ಪತ್ತೆಯಾಯಿತು.* ಚೆಲೋನೋಇಡೀಸ್ ನೈಗರ್ ಫಂಟಾಸ್ಟಿಕಸ್ ಉಪ ತಳಿಯದ್ದೇ ಎನ್ನುವುದನ್ನು ದೃಡೀಕರಿಸಲು 2021 ಮೇ ತಿಂಗಳಲ್ಲಿ ಅನುವಂಶಿಕ ಪರೀಕ್ಷೆ ನಡೆಸಲಾಯಿತು.* ಫರ್ನಾಂಡಿನ ದ್ವೀಪವು ಗಲಪಗೋಸ್ ದ್ವೀಪ ಸಮೂಹದ 3 ನೇ ಅತ್ಯಂತ ದೊಡ್ಡ ಹಾಗು ಅತ್ಯಂತ ಯುವ ದ್ವೀಪವಾಗಿದೆ.* ಇದರ ವಿಸ್ತೀರ್ಣ 642 ಕಿಲೋ ಮೀಟರ್ ಹಾಗು 1,476 ಮೀಟರ್ ಎತ್ತರವಿದೆ.* ಈ ದ್ವೀಪದ ಜ್ವಾಲಾಮುಖಿ ಕುಂಡದ ಉತ್ತುಂಗವು 6.5 ಕಿಲೋ ಮೀಟರ್ ಅಗಲವಿದೆ.