Job Description: * ಚಿನ್ನದ ಮರು ಬಳಕೆಯಲ್ಲಿ ಭಾರತಕ್ಕೆ ವಿಶ್ವದಲ್ಲೇ 4 ನೇ ಸ್ಥಾನ ಪಡೆದುಕೊಂಡಿದೆ * ವಲ್ಡ್‌ ಗೋಲ್ಡ್‌ ಕೌನ್ಸಿಲ್‌ (ಡಬ್ಲ್ಯುಜಿಸಿ) ವರದಿ ಪ್ರಕಾರ, ಭಾರತದಲ್ಲಿ 2021 ರಲ್ಲಿ 75 ಟನ್‌ ಚಿನ್ನವು ಮರು ಬಳಕೆಯಾಗಿದೆ.* ಭಾರತೀಯ ಚಿನ್ನದ ಮಾರುಕಟ್ಟೆಯ ಆಳವಾದ ವಿಶ್ಲೇಷಣೆಯ ಭಾಗವಾಗಿ 'ಚಿನ್ನದ ಶುದ್ಧೀಕರಣ ಮತ್ತು ಮರುಬಳಕೆ' ಶೀರ್ಷಿಕೆಯ ವರದಿಯನ್ನು ಡಬ್ಲ್ಯುಜಿಸಿ ಬಿಡುಗಡೆಗೊಳಿಸಿದೆ.* ಭಾರತದಲ್ಲಿನ ಚಿನ್ನದ ಸಂಸ್ಕರಣಾ ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಜಾಗತಿಕ ಚಿನ್ನದ ಮರು ಬಳಕೆಯಲ್ಲಿ ದೇಶವು ನಾಲ್ಕನೇ ಸ್ಥಾನದಲ್ಲಿದೆ.* 2013 ರಿಂದ 2021 ರವರೆಗೆ, ಭಾರತದ ಚಿನ್ನದ ಸಂಸ್ಕರಣಾ ಸಾಮರ್ಥ್ಯವು 1,500 ಟನ್‌ ಅಂದರೆ ಶೇ.500 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಿದೆ * ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಡಬ್ಲ್ಯುಜಿಸಿ ಭಾರತದ ಪ್ರಾದೇಶಿಕ ಸಿಇಒಓ ಸೋಮಸುಂದರಂ ಪಿ.ಆರ್‌, 'ಮುಂದಿನ ಹಂತದ ಮಾರುಕಟ್ಟೆ ಸುಧಾರಣೆ, ಜವಾಬ್ದಾರಿಯುತ ಸಂಪನ್ಮೂಲಗಳ ಶೇಖರಣೆ, ಚಿನ್ನದ ಗಟ್ಟಿಗಳ ರಫ್ತು ಸ್ಕ್ರ್ಯಾಪ್‌ನ ಸ್ಥಿರ ಪೂರೈಕೆಯನ್ನು ಉತ್ತೇಜಿಸಿದರೆ ಭಾರತವು ಸ್ಪರ್ಧಾತ್ಮಕ ಸಂಸ್ಕರಣಾ ಕೇಂದ್ರವಾಗಿ ಹೊರ ಹೊಮ್ಮುವ ಸಾಮರ್ಥ್ಯ ಹೊಂದಿದೆ' ಎಂದಿದ್ದಾರೆ.