Job Description: * ಆಸ್ಟ್ರೇಲಿಯಾದ ಲಿಸಾ ಸ್ಥಳೀಕರ್ ಅವರು ಅಂತರಾಷ್ಟ್ರೀಯ ಕ್ರಿಕೆಟರ್ಸ್ ಸಂಸ್ಥೆಗಳ ಫೆಡರೇಷನ್‌ಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ನೇಮಕಗೊಂಡಿ ದ್ದಾರೆ* ಸ್ವಿಟ್ಟರ್ಲೆಂಡ್‌ನ ನಿಯೊನ್‌ನಲ್ಲಿ ನಡೆದ ಎಫ್‌ಐಸಿಎನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಲಿಸಾ ಅವರ ನೇಮಕವನ್ನು ದೃಢಪಡಿಸಲಾಗಿದೆ* ಲಿಸಾ ಅವರು ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ನಾಯಕಿ* ಹಿಂದೆ ದಕ್ಷಿಣ ಆಫ್ರಿಕಾದ ಬ್ಯಾರಿ ರಿಚರ್ಡ್ಸ್ , ವೆಸ್ಟ್ ಇಂಡೀಸ್‌ನ ಜಿಮ್ಮಿ ಆಡಮ್ಸ್ ಮತ್ತು ಇಂಗ್ಲೆಂಡ್‌ನ ವಿಕ್ರಂ ಸೋಲಂಕಿ ನಿರ್ವಹಿಸಿದ್ದ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ * ಆಸ್ಟ್ರೇಲಿಯಾ ಆಟಗಾರತಿ ಲಿಸಾ ಮೂರೂ ಮಾದರಿಗಳಲ್ಲಿ 187 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ* 2005 , 2013 ರಲ್ಲಿ ಏಕದಿನ ವಿಶ್ವಕಪ್ ಮತ್ತು 2010 , 2012 ರಲ್ಲಿ ಟಿ 20 ವಿಶ್ವಕಪ್ ಟೂರ್ನಿಯ ಜಯಿಸಿದ ತಂಡದ ಭಾಗವಾಗಿದ್ದರು* 2021 ರಲ್ಲಿ ಲಿಸಾ ಅವರು ಆಸ್ಟ್ರೇಲಿಯಾದ ' ಕ್ರಿಕೆಟ್ ಹಾಲ್ ಆಫ್ ಫೇಮ್ ' ಗೌರವವನ್ನು ತಮ್ಮದಾಗಿಸಿ ಕೊಂಡರು* 'ಕ್ರಿಕೆಟ್ ಹಾಲ್ ಆಫ್ ಫೇಮ್ 'ಗಳಿಸಿದ ಆಸ್ಟ್ರೇಲಿಯಾದ ನಾಲ್ಕನೇ ಮಹಿಳೆ ಎನಿಸಿಕೊಂಡಿದ್ದರು