Job Description: * ಬೆಂಗಳೂರಿನಲ್ಲಿ 27,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಮೋದಿ * ಬೆಂಗಳೂರು ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ, ಬೆಂಗಳೂರು ಕಂಟೋನ್ಮೆಂಟ್‌ನ ಪುನರಾಭಿವೃದ್ಧಿ ಮತ್ತು ಯಶವಂತಪುರ ಜಂಕ್ಷನ್‌ ರೈಲು ನಿಲ್ದಾಣ, ಬೆಂಗಳೂರು ವರ್ತುಲ ರಸ್ತೆ ಯೋಜನೆಯ ಎರಡು ವಿಭಾಗಗಳು, ಬಹು ರಸ್ತೆ ಉನ್ನತೀಕರಣ ಯೋಜನೆಗಳು ಮತ್ತು ಬೆಂಗಳೂರಿನ ಮಲ್ಟಿಮೋಡಲ್‌ ಲಾಜಿಸ್ಟಿಕ್ಸ್‌ ಪಾರ್ಕ್‌ ಅನ್ನು ಶಂಕುಸ್ಥಾಪನೆ ಮಾಡಲಾಯಿತು.* ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ದ್ದರು. ಅಲ್ಲಿ ಅವರು ನಾಗನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಕೋಚಿಂಗ್ ಟರ್ಮಿನಲ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ʻಭಾರತೀಯ ವಾಕ್‌ಶ್ರವಣ ಸಂಸ್ಥೆʼಯಲ್ಲಿ (ಎ.ಐ.ಐ.ಎಸ್.ಎಚ್) 'ಸಂವಹನ ಅಸ್ವಸ್ಥೆಗಳುಳ್ಳ ವ್ಯಕ್ತಿಗಳಿಗೆ ಉತ್ಕೃಷ್ಟತಾ ಕೇಂದ್ರ'ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.* ಈ ಕಾರ್ಯಕ್ರಮದ ವೇಳೆ, ಸುಮಾರು 315 ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕ ವಿಮಾನ ನಿಲ್ದಾಣದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾದ ಬೈಯಪ್ಪನಹಳ್ಳಿಯಲ್ಲಿರುವ ಭಾರತದ ಮೊಟ್ಟಮೊದಲ ಹವಾನಿಯಂತ್ರಿತ ರೈಲ್ವೆ ನಿಲ್ದಾಣವಾದ ʻಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣʼವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.* ಉಡುಪಿ, ಮಡಗಾಂವ್ ಮತ್ತು ರತ್ನಗಿರಿಯಿಂದ ವಿದ್ಯುತ್ ಚಾಲಿತ ರೈಲುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ರೋಹಾ (ಮಹಾರಾಷ್ಟ್ರ)ದಿಂದ ತೋಕೂರು (ಕರ್ನಾಟಕ)ವರೆಗಿನ ಕೊಂಕಣ ರೈಲು ಮಾರ್ಗದ (ಸುಮಾರು 740 ಕಿ.ಮೀ) 100 ಪ್ರತಿಶತ ವಿದ್ಯುದ್ದೀಕರಣ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಕೊಂಕಣ ರೈಲ್ವೆ ಮಾರ್ಗದ ವಿದ್ಯುದ್ದೀಕರಣವನ್ನು 1280 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಮಾಡಲಾಗಿದೆ.