Job Description: * ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾರತೀಯ ಮೂಲದ ಭದ್ರತಾ ತಜ್ಞೆ ರಾಧಾ ಅಯ್ಯಂಗಾರ್ ಪ್ಲಂಬ್ ಅವರನ್ನು ಅಮೇರಿಕಾ ರಕ್ಷಣಾ ಇಲಾಖೆಯ ಸ್ವಾಧೀನ ಮತ್ತು ಸುಸ್ಥಿರ ರಕ್ಷಣಾ ಉಪ ಅಧೀನ ಕಾರ್ಯ ದರ್ಶಿ ಹುದ್ದೆಗೆ ನೇಮಕ ಮಾಡಿದ್ದಾರೆ * ಚೀಫ್ ಆಫ್ ಸ್ಟಾಫ್ ಆಗಿ ನೇಮಕಗೊಳ್ಳುವ ಮೊದಲು, ಪ್ಲಂಬ್ ಅವರು ಗೂಗಲ್‌ನಲ್ಲಿ ಸಂಶೋಧನಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.* ವ್ಯಾಪಾರ ವಿಶ್ಲೇಷಣೆ, ಡೇಟಾ ವಿಜ್ಞಾನ ಮತ್ತು ತಾಂತ್ರಿಕ ಸಂಶೋಧನೆಯಲ್ಲಿ ತಂಡವನ್ನು ಮುನ್ನಡೆಸಿದರು. ಅಲ್ಲದೆ ಅವರು ಫೇಸ್‌ಬುಕ್‌ನಲ್ಲಿ ಪಾಲಿಸಿ ಅನಾಲಿಸಿಸ್ನ ಜಾಗತಿಕ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದು, ಅಂತಾರಾಷ್ಟ್ರೀಯ ಭದ್ರತಾ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ವ್ಯವಹರಿಸಿದ್ದಾರೆ ಎನ್ನಲಾಗಿದೆ.