Job Description: * ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 14 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಅವರು ಪುಣೆಯ ದೇಹುವಿನಲ್ಲಿ ಜಗದ್ಗುರು ಶ್ರೀಸಂತ್ ತುಕಾರಾಮ್ ಮಹಾರಾಜ್ ದೇವಾಲಯವನ್ನು ಉದ್ಘಾಟಿಸಲಿದ್ದಾರೆ.* ಮುಂಬೈನ ರಾಜಭವನದಲ್ಲಿ ಜಲಭೂಷಣ ಕಟ್ಟಡ ಮತ್ತು ಕ್ರಾಂತಿಕಾರಿಗಳ ಗ್ಯಾಲರಿಯನ್ನು, ಪುಣೆಯ ದೇಹುವಿನಲ್ಲಿ ಜಗದ್ಗುರು ಶ್ರೀಸಂತ್ ತುಕಾರಾಮ್ ಮಹಾರಾಜ್ ದೇವಾಲಯ ಉದ್ಘಾಟಿಸಿ ತದನಂತರ ಅವರು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಮುಂಬೈ ಸಮಾಚಾರ್ ನ ದ್ವಿಶತಾಬ್ದಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.* ಜಲ ಭೂಷಣ್ 1885 ರಿಂದ ಮಹಾರಾಷ್ಟ್ರದ ರಾಜ್ಯಪಾಲರ ಅಧಿಕೃತ ನಿವಾಸವಾಗಿದೆ. ಅದರ ಜೀವಿತಾವಧಿಯನ್ನು ಪೂರ್ಣಗೊಳಿಸಿದ ನಂತರ, ಅದನ್ನು ನೆಲಸಮಗೊಳಿಸಲಾಯಿತು ಮತ್ತು ಅದರ ಜಾಗದಲ್ಲಿ ಹೊಸ ಕಟ್ಟಡವನ್ನು ಮಂಜೂರು ಮಾಡಲಾಯಿತು. 2019 ರ ಆಗಸ್ಟ್ ನಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.* 2016 ರಲ್ಲಿ, ಮಹಾರಾಷ್ಟ್ರದ ಆಗಿನ ರಾಜ್ಯಪಾಲ ಶ್ರೀ ವಿದ್ಯಾಸಾಗರ್ ರಾವ್ ಅವರು ರಾಜಭವನದಲ್ಲಿ ಬಂಕರ್ ಅನ್ನು ಕಂಡುಕೊಂಡಿದ್ದರು. ಇದನ್ನು ಈ ಹಿಂದೆ ಬ್ರಿಟಿಷರು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ರಹಸ್ಯ ಸಂಗ್ರಹವಾಗಿ ಬಳಸುತ್ತಿದ್ದರು. ಬಂಕರ್ ಅನ್ನು 2019 ರಲ್ಲಿ ನವೀಕರಿಸಲಾಯಿತು.* ಮುಂಬೈ ಸಮಾಚಾರ್ ಅನ್ನು ಸಾಪ್ತಾಹಿಕವಾಗಿ ಮುದ್ರಿಸುವುದನ್ನು 1822 ರ ಜುಲೈ 1 ರಂದು ಫರ್ದುಂಜಿ ಮಾರ್ಜ್ಬಾಂಜಿ ಪ್ರಾರಂಭಿಸಿದರು. ನಂತರ ಇದು 1832 ರಲ್ಲಿ ದೈನಿಕವಾಯಿತು. ಈ ಪತ್ರಿಕೆಯು 200 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗಿದೆ.