Job Description: * ಕಸ್ತೂರಿರಂಗನ್ ಸಮಿತಿ ನೀಡಿದ ವರದಿಗೆ ವಿರೋಧ ಸೂಚಿಸಿದ ರಾಜ್ಯಗಳ ಅಹವಾಲುಗಳನ್ನು ಪರಿಶೀಲಿಸುವ ಸಲುವಾಗಿ ಕೇಂದ್ರ ಪರಿಸರ ಸಚಿವಾಲಯವು ಹೊಸ ಸಮಿತಿಯನ್ನು ರಚಿಸಿದೆ .* ಕಸ್ತೂರಿರಂಗನ್ ಸಮಿತಿಯು ಪಶ್ಚಿಮ ಘಟ್ಟ ಪ್ರದೇಶದ ಮೂರನೇ ಒಂದಕ್ಕಿಂತಲೂ ಅಧಿಕ ಭಾಗವನ್ನು ' ಪರಿಸರ ಸೂಕ್ಷ್ಮ ಪ್ರದೇಶ ' ಎಂದು ಗುರುತಿಸಲು ಸಲಹೆ ನೀಡಿತ್ತು* ಕರ್ನಾಟಕ ಸಹಿತ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಗೆ ಬರುವ ಆರು ರಾಜ್ಯಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಕಾರಣ ಹಿರಿಯ ಅರಣ್ಯ ಅಧಿಕಾರ- ಸಂಜಯ್ ಕುಮಾರ್‌ ನೇತೃತ್ವದ ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ * ಮಾಧವ ಗಾಡ್ತೀಸ್ ಸಮಿತಿ ವರದಿ ಸಲ್ಲಿಸಿ 12 ವರ್ಷ ಕಳೆದಿದ್ದು, ಕಸ್ತೂರಿರಂಗನ್ ಸಮಿತಿ ವರದಿ ನೀಡಿ ದಶಕವೇ ಕಳೆದಿದೆ.* ಕೇರಳದ ಬಿಷಪ್‌ಗಳು ಸಹಿತ ಹಲವರಿಂದ ನಾವು ಸಲಹೆಗಳನ್ನು ಸ್ವೀಕರಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ * ಸಮಿತಿ ಗೋವಾ , ಕರ್ನಾಟಕ , ಕೇರಳ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳ ಪ್ರತಿನಿಧಿಗಳೊಂದಿಗೆ ಆಕ್ಷೇಪಗಳ ಕುರಿತು ಸಮಗ್ರ ಚರ್ಚೆ ನಡೆಸುವುದು , ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಈಚೆಗೆ ಸಂಭವಿಸಿದ ನೈಸರ್ಗಿಕ ವಿಕೋಪಗಳನ್ನು ಗಮನದಲ್ಲಿ ಇಟ್ಟುಕೊಂಡು ಬಂದಿರುವ ಸಲಹೆಗಳನ್ನು ಹೊಣೆಗಾರಿಕೆಯನ್ನು ಈ ಸಮಿತಿಗೆ ನಿರ್ಧರಿಸಲಿದೆ.