Job Description: * ರಾಷ್ಟ್ರೀಯ ಪರಿಸರ ಅಧ್ಯಯನ ಸಂಸ್ಥೆ ಜಪಾನ್‌ ಹಾಗೂ ಆರ್ಯಭಟ ಸಂಶೋಧನಾ ಮತ್ತು ಗಮನ ವಿಜ್ಞಾನಗಳ ಸಂಸ್ಥೆಯ ನಡುವೆ ಒಪ್ಪಂದಕ್ಕೆ ಭಾರತ ಸರ್ಕಾರವು ಸಹಿ ಹಾಕಿದೆ. * ಹವಾಮಾನ ಬದಲಾವಣೆ ಹಾಗೂ ಗುಣಮಟ್ಟದ ಗಾಳಿಯ ಕುರಿತು ಜಂಟಿ ಅಧ್ಯಯನ ಮಾಡಲು ವೃತ್ತಿರನಿರತರ ಸಮಿತಿ ರಚನೆಗೆ ಈ ಒಪ್ಪಂದ ಏರ್ಪಟ್ಟಿದೆ.* ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿರುವ ಕೇಂದ್ರ ಸಚಿವ ಸಂಪುಟವು ಜಪಾನ್‌ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.* ಈ ಒಪ್ಪಂದವು ಜಪಾನ್‌ನ ರಾಷ್ಟ್ರೀಯ ಪರಿಸರ ಅಧ್ಯಯನ ಮತ್ತು ಭಾರತದ ಆರ್ಯಭಟ್ಟ ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ಹವಾಮಾನ ಬದಲಾವಣೆ ಮತ್ತು ಗುಣಮಟ್ಟದ ಗಾಳಿಯ ಕುರಿತು ಜಂಟಿಯಾಗಿ ಸಂಶೋಧನೆ ನಡೆಸಲು ಸಹಕಾರಿ ಮಾರ್ಗಸೂಚಿಗಳನ್ನು ಸ್ಪಷ್ಟಪಡಿಸುತ್ತದೆ.* * ಈ ಸಂಸ್ಥೆಗಳು ಈ ಕೆಳಗಿನ ಕೆಲವು ಚಟುವಟಿಕೆಗಳನ್ನು ಕೈಗೊಳ್ಳಲಿವೆ :* ವೈಜ್ಞಾನಿಕ ಉಪಕರಣಗಳ ಜಂಟಿ ಬಳಕೆ ಮತ್ತು ಕಾರ್ಯಾಚರಣೆ* ಸಂಶೋಧನೆಯ ವಿಧಾನಗಳಲ್ಲಿ ವೈಜ್ಞಾನಿಕ ಮತ್ತು ತಂತ್ರಜ್ಞಾನ ಮಾಹಿತಿಯ ವಿನಿಮಯ* ಅವಲೋಕಿಸಿದ, ಅಧ್ಯಯಿಸಿದ ವಿಷಯಗಳ ಜಂಟಿ ವಿಶ್ಲೇಷಣೆ ಮತ್ತು ವೈಜ್ಞಾನಿಕ ವರದಿಗಳ ತಯಾರಿಕೆ* ಜಂಟಿಯಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು* ಸಂಶೋಧನೆಗಾಗಿ ಪಿಎಚ್‌ಡಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ವಿನಿಮಯ ಕಾರ್ಯಕ್ರಮ* ಜಂಟಿ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು**ಆರ್ಯಭಟ್ಟ ಸಂಶೋಧನಾ ಸಂಸ್ಥೆ: ಇದೊಂದು ಸ್ವಾಯತ್ತ ಸಂಶೋಧನಾ ಸಂಸ್ಥೆಯಾಗಿದ್ದು, ಭಾರತೀಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಇದನ್ನು ಸ್ಥಾಪಿಸಿದೆ. ಖಗೋಳ ವಿಜ್ಞಾನ, ಖಗೋಳ ಭೌತಶಾಸ್ತ್ರ ಹಾಗೂ ವಾಯುಮಂಡಲ ವಿಜ್ಞಾನಗಳನ್ನು ಅಧ್ಯಿಸುವ ಸಂಸ್ಥೆಯಾಗಿದೆ. * *ರಾಷ್ಟ್ರೀಯ ಪರಿಸರ ಅಧ್ಯಯನ ಸಂಸ್ಥೆ ಜಪಾನ್‌ ಕುರಿತು :* ಪರಿಸರ ವಿಜ್ಞಾನಗಳ ಕುರಿತು ಸಮಗ್ರವಾಗಿ ಹಾಗೂ ಸ್ಥೂಲವಾಗಿ ಅಧ್ಯಯನ ಮಾಡುವ ಏಕೈಕ ಸಂಸ್ಥೆಯಾಗಿದೆ. ಪರಿಸರ ಸಂರಕ್ಷೆಗೆ ವೈಜ್ಞಾನಿಕ ಪರಿಹಾರಗಳನ್ನು ಈ ಸಂಸ್ಥೆಯು ಸೂಚಿಸುತ್ತದೆ. * ದತ್ತಾಂಶ ಮಾಹಿತಿ ಸಂಗ್ರಹ, ವಿಶ್ಲೇಷಣೆ, ವೈಜ್ಞಾನಿಕವಾಗಿ ಪರಿಸರ ಮಾದರಿಗಳ ಸಂಗ್ರಹ ಮಾಡುತ್ತದೆ. ಸಂಶ್ಲೇಶಣೆ, ಸಮಗ್ರ, ವಿಕಾಸ ಹಾಗೂ ನೆಟ್ ವರ್ಕ್‌ ಎಂಬ ನಾಲ್ಕು ಮೂಲ ಅಂಶಗಳನ್ನಿರಿಸಿಕೊಂಡು ತನ್ನ ಧ್ಯೇಯೋದ್ದೇಶಗಳಿಗಾಗಿ ಶ್ರಮಿಸುತ್ತಿದೆ.