Job Description: * ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜೂನ್ 9 ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಬಯೋಟೆಕ್ ಸ್ಟಾರ್ಟ್ಅಪ್ ಎಕ್ಸ್ ಪೊ – 2022 ಉದ್ಘಾಟಿಸಲಿದ್ದಾರೆ. * ಎರಡು ದಿನಗಳ ಈ ಬಯೋಟೆಕ್ ಸ್ಟಾರ್ಟ್ ಅಪ್ ಎಕ್ಸ್ ಪೊ -2022 ಜೂನ್ 9 ಮತ್ತು 10 ರಂದು ನಡೆಯಲಿದೆ.* ಇದನ್ನು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ನೆರವಿನ ಮಂಡಳಿ(ಬಿಐಆರ್ ಎಸಿ – ಬಿರಾಕ್) ಆಯೋಜಿಸಿದೆ. ಬಿರಾಕ್ ಸ್ಥಾಪನೆಯಾಗಿ 10 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇದನ್ನು ಆಯೋಜಿಸಲಾಗಿದೆ.* ಈ ಎಕ್ಸ್ ಪೋನ ಘೋಷವಾಕ್ಯ “ಬಯೋಟೆಕ್ ಸ್ಟಾರ್ಟ್ ಅಪ್ ನಾವಿನ್ಯತೆಗಳು; ಆತ್ಮನಿರ್ಭರ ಭಾರತದತ್ತ’ ಎಂಬುದಾಗಿದೆ. * ಈ ಎಕ್ಸ್ ಪೊ ಉದ್ಯಮಿಗಳು, ಹೂಡಿಕೆದಾರರು, ಕೈಗಾರಿಕೋದ್ಯಮಿಗಳು, ವಿಜ್ಞಾನಿಗಳು, ಸಂಶೋಧಕರು, ಬಯೋ-ಇನ್ ಕ್ಯುಬೇಟರ್ಸ್, ಉತ್ಪಾದಕರು, ನಿಯಂತ್ರಕರು, ಸರ್ಕಾರಿ ಅಧಿಕಾರಿಗಳನ್ನು ಒಗ್ಗೂಡಿಸಿ ಅವರಿಗೆ ವೇದಿಕೆ ಒದಗಿಸಲಿದೆ. * ಎಕ್ಸ್ ಪೋದಲ್ಲಿ ಸುಮಾರು 300 ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಅವುಗಳಲ್ಲಿ ಆರೋಗ್ಯ ರಕ್ಷಣೆ, ಜಿನೋಮಿಕ್ಸ್, ಬಯೋಫಾರ್ಮ, ಕೃಷಿ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಸಂಪತ್ತಿನಿಂದ ಮೌಲ್ಯ, ಶುದ್ಧ ಇಂಧನ ಸೇರಿದಂತೆ ಹಲವು ವಲಯಗಳಲ್ಲಿ ಜೈವಿಕ ತಂತ್ರಜ್ಞಾನ ಅಳವಡಿಕೆ ಕುರಿತ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುವುದು.