Job Description: * ಪರಿಸರ ದಿನಾಚರಣೆಯ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ 'ಪರಿಸರಕ್ಕಾಗಿ ಜೀವನಶೈಲಿ - ಲೈಫ್ ಅಭಿಯಾನ' ಎಂಬ ಜಾಗತಿಕ ಉಪಕ್ರಮಕ್ಕೆ ಚಾಲನೆ ನೀಡಿದರು.* "ಮಾನವ-ಕೇಂದ್ರಿತ, ಸಾಮೂಹಿಕ ಪ್ರಯತ್ನಗಳು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸುವ ದೃಢವಾದ ಕ್ರಮಗಳನ್ನು ಬಳಸಿಕೊಂಡು ನಮ್ಮ ಗ್ರಹ ಎದುರಿಸುತ್ತಿರುವ ಸವಾಲನ್ನು ಪರಿಹರಿಸುವುದು ಈ ಹೊತ್ತಿನ ಅಗತ್ಯವಾಗಿದೆ" ಎಂದು ಮೋದಿ ಅವರು ಹೇಳಿದರು.* ವರ್ಲ್ಡ್ ರಿಸೋರ್ಸಸ್ ಸಂಸ್ಥೆಯ ಸಿಇಓ ಮತ್ತು ಅಧ್ಯಕ್ಷ ಶ್ರೀ ಅನಿರುದ್ಧ ದಾಸ್ ಗುಪ್ತಾ ಅವರು, ನಾವು ಹೇಗೆ ಜೀವಿಸುತ್ತೇವೆ, ನಾವು ಹೇಗೆ ಸೇವಿಸುತ್ತೇವೆ ಮತ್ತು ನಾವು ಗ್ರಹದ ಬಗ್ಗೆ ಹೇಗೆ ಕಾಳಜಿ ವಹಿಸುತ್ತೇವೆ ಎಂಬುದರ ಕುರಿತ ಹೇಳಿದರು.* ಕಳೆದ ವರ್ಷ ಗ್ಲಾಸ್ಗೋದಲ್ಲಿ ನಡೆದ 26 ನೇ ಯುನೈಟೆಡ್ ನೇಷನ್ಸ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್ ಆಫ್ ದಿ ಪಾರ್ಟಿಟೀಸ್(COP26) ಸಂದರ್ಭದಲ್ಲಿ LiFE ಕಲ್ಪನೆಯನ್ನು ಪ್ರಧಾನಿ ಪರಿಚಯಿಸಿದ್ದರು. ಈ ಕಲ್ಪನೆಯು ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸುತ್ತದೆ. ಇದು ‘ಬುದ್ಧಿರಹಿತ ಮತ್ತು ವಿನಾಶಕಾರಿ ಬಳಕೆ’ ಬದಲಿಗೆ ‘ಮನಸ್ಸಿಗೆ ಹಿತ ಮತ್ತು ಉದ್ದೇಶಪೂರ್ವಕ ಬಳಕೆ’ ಮೇಲೆ ಕೇಂದ್ರೀಕರಿಸುತ್ತದೆ ಎಂದು ವಿವರಿಸಿದ್ದರು.