Job Description: * ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ದಿನಾಂಕ : 3 ನೇ ಜೂನ್, 2022 ರಂದು ದೇಶಾದ್ಯಂತ ವಿಶ್ವ ಸೈಕಲ್ ದಿನವನ್ನು ಆಯೋಜಿಸುತ್ತಿದೆ. * ಶ್ರೀ ಅನುರಾಗ್ ಠಾಕೂರ್ ಅವರು ನವದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಿಂದ ವಿಶ್ವ ಬೈಸಿಕಲ್ ದಿನದಂದು ರಾಷ್ಟ್ರವ್ಯಾಪಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು.* ಮಾರ್ಚ್ 12, 2021 ರಂದು ಆಜಾದಿ ಕಾ ಅಮೃತ್ ಮಹೋತ್ಸವದ ಆರಂಭದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಉದ್ಘಾಟನಾ ಭಾಷಣದಿಂದ ಸ್ಫೂರ್ತಿ ಪಡೆದು, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ʼಆಜಾದಿ ಕಾ ಅಮೃತ್ ಮಹೋತ್ಸವʼದ ಆಚರಣೆಯನ್ನು ಕ್ರಿಯೆಗಳು ಮತ್ತು ನಿರ್ಣಯಗಳ ಆಧಾರ ಸ್ತಂಭ @ 75 ರ ಅಡಿಯಲ್ಲಿ ಪರಿಕಲ್ಪನೆ ಮಾಡಿದೆ.* ಕೇಂದ್ರ ಸಚಿವರು 750 ಯುವ ಸೈಕ್ಲಿಸ್ಟ್‌ಗಳೊಂದಿಗೆ 7.5 ಕಿಮೀ ಸೈಕಲ್‌ನಲ್ಲಿ ಪಯಣಿಸಲಿದ್ದಾರೆ. ಇದಲ್ಲದೆ, ಎನ್‌ವೈಕೆಎಸ್‌ನಿಂದ 35 ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳಲ್ಲಿ, ದೇಶದಾದ್ಯಂತ ಇರುವ 75 ಪ್ರತಿಷ್ಙಿತ ಸ್ಥಳಗಳಲ್ಲಿ 75 ಜನರು ಭಾಗವಹಿಸಿ 7.5 ಕಿಮೀ ದೂರವನ್ನು ಕ್ರಮಿಸಲಿದ್ದಾರೆ. ಇದಲ್ಲದೆ, ನೆಹರು ಯುವ ಕೇಂದ್ರ ಸಂಘಟನೆಯು ತನ್ನ ಯುವ ಸ್ವಯಂಸೇವಕರು ಮತ್ತು ಯೂತ್ ಕ್ಲಬ್‌ಗಳ ಸದಸ್ಯರ ಬೆಂಬಲ ಮತ್ತು ಕೊಡುಗೆಯೊಂದಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ದೇಶದ ಎಲ್ಲಾ ಬ್ಲಾಕ್‌ಗಳಲ್ಲಿ ಈ ಸೈಕಲ್ ರ‍್ಯಾಲಿಗಳನ್ನು ಕೈಗೊಳ್ಳುತ್ತಿದೆ.* 3 ನೇ ಜೂನ್ 2022 ರಂದು ವಿಶ್ವ ಬೈಸಿಕಲ್ ದಿನದ ಸಂದರ್ಭದಲ್ಲಿ, ದೇಶದಾದ್ಯಂತ 1.29 ಲಕ್ಷ ಯುವ ಸೈಕ್ಲಿಸ್ಟ್‌ಗಳು ಉದ್ದೇಶಿತ ಬೈಸಿಕಲ್ ರ‍್ಯಾಲಿಗಳ ಮೂಲಕ ಒಂದೇ ದಿನದಲ್ಲಿ ಅಂದರೆ 3 ನೇ ಜೂನ್ 2022 ರಂದು 9.68 ಲಕ್ಷ ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ.* ಬೊಜ್ಜು, ಆಲಸ್ಯ, ಒತ್ತಡ, ಆತಂಕ, ರೋಗಗಳು ಇತ್ಯಾದಿಗಳಿಂದ ಮುಕ್ತಿ ಪಡೆಯುವುದು ಮತ್ತು ದೈಹಿಕ ಸಾಮರ್ಥ್ಯದ ಚಟುವಟಿಕೆಗಳಿಗಾಗಿ ಜನರು ತಮ್ಮ ದೈನಂದಿನ ಜೀವನದಲ್ಲಿ ಸೈಕ್ಲಿಂಗ್ ಅನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು ಮತ್ತು ಪ್ರೇರೇಪಿಸುವುದು ಗುರಿಯಾಗಿದೆ. * ಸಾಮಾನ್ಯ ನಾಗರಿಕರು ಸೈಕ್ಲಿಂಗ್ ಅನ್ನು ಅಳವಡಿಸಿಕೊಳ್ಳುವುದರಿಂದ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ಅನುಕೂಲವಾಗುತ್ತದೆ.* ವಿಶ್ವ ಬೈಸಿಕಲ್ ದಿನದ ಆಚರಣೆಯ ಮೂಲಕ, ನಾಗರಿಕರಿಗೆ ತಮ್ಮ ಜೀವನದಲ್ಲಿ ಪ್ರತಿದಿನ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಸೇರಿಸಲು ಸಂಕಲ್ಪ ಮಾಡಲು ಕರೆ ನೀಡಲಾಗುವುದು “ಫಿಟ್ನೆಸ್ ಕಿ ಡೋಸ್ ಆಧಾ ಘಂಟಾ ರೋಜ್”- “ಫಿಟ್ನೆಸ್‌ ನ ಡೋಸ್‌ ಅರ್ಧ ಗಂಟೆ ಪ್ರತಿದಿನ”.