Job Description: * ಪ್ರಧಾನಿ ನರೇಂದ್ರ ಮೋದಿ ಭಾರತದ ಅತಿದೊಡ್ಡ ಡ್ರೋನ್ ಮಹೋತ್ಸವ 27 ಮೇ 2022 ರಂದು ಉದ್ಘಾಟನೆ ಮಾಡಲಿದ್ದಾರೆ.* ಜೊತೆಗೆ ಡ್ರೋನ್ ಹಾರಾಟವನ್ನೂ ಅವರು ವೀಕ್ಷಿಸಲಿದ್ದು, ಜೊತೆಗೆ ರೈತ ಡ್ರೋನ್ ಪೈಲಟ್ಗಳ ಜೊತೆಗೆ ಸಂವಾದ ನಡೆಸಲಿದ್ದಾರೆ.* ನವದೆಹಲಿಯ ಪ್ರಗತಿ ಮೈದಾನದಲ್ಲಿ ಮೇ 27 ರಂದು ಡ್ರೋನ್ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ * ಡ್ರೋನ್‌ಗಳ ಪ್ರಸ್ತುತ ಕಣ್ಗಾವಲು, ನಿರ್ಣಾಯಕ ಸ್ವತ್ತುಗಳ ತಪಾಸಣೆ ಮತ್ತು ಮೇಲ್ವಿಚಾರಣೆ, ಸಮೀಕ್ಷೆಗೆ ಬಳಸಲಾಗುತ್ತದೆ. ಇದರೊಂದಿಗೆ ರಕ್ಷಣೆ ಮತ್ತು ಆಂತರಿಕ ಭದ್ರತೆ, ಕೃಷಿ, ತೈಲ ಮತ್ತು ಅನಿಲ, ಇಂಧನ ಮತ್ತು ಉಪಯೋಗ, ದೂರಸಂಪರ್ಕ, ಭೌಗೋಳಿಕ ಸಮೀಕ್ಷೆ, ಗಣಿಗಾರಿಕೆ, ನಿರ್ಮಾಣ ಮತ್ತು ಸಾರಿಗೆಯಂತಹ ಅನೇಕ ಕಾರ್ಯಗಳಿಗೂ ಡ್ರೋನ್‌ ಬಳಕೆ ಮಾಡಲಾಗುತ್ತದೆ.* ಪ್ರಧಾನಿ ದೇಶದ ವಿವಿಧ ಭಾಗದ ಕೃಷಿ ಭೂಮಿಯಲ್ಲಿ ಕೀಟನಾಶಕಗಳನ್ನು ಸಿಂಪಡಿಸಲು 100 ಕಿಸಾನ್‌ ಡ್ರೋನ್‌ಗಳಿಗೆ ಚಾಲನೆ ನೀಡಿದ್ದರು. ಡ್ರೋನ್‌ಗಳನ್ನು ವಿಶೇಷವಾಗಿ ಕೃಷಿಯಲ್ಲಿ ಗೊಬ್ಬರ ಹಾಗೂ ಕೀಟನಾಶಕ ಸಿಂಪಡಣೆಗೆ, ಬೆಳೆಗಳ ಮೌಲ್ಯಮಾಪನ, ಬೆಳೆ ಸಾಗಾಣಿಕೆ, ಭೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.