Job Description: * ಟೋಕಿಯೊದಲ್ಲಿ ಎನ್‌ಇಸಿ ಕಾರ್ಪೊರೇಶನ್‌ನ ಅಧ್ಯಕ್ಷ ಡಾ. ನೊಬುಹಿರೊ ಎಂಡೊ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದರು.* ಭಾರತದ ಚೆನ್ನೈ-ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಸಿಎಎನ್‌ಐ) ಮತ್ತು ಕೊಚ್ಚಿ-ಲಕ್ಷದ್ವೀಪ ದ್ವೀಪಗಳು (ಕೆಎಲ್‌ಐ) ಒಎಫ್‌ಸಿ ಯೋಜನೆಗಳನ್ನು ಕೈಗೊಳ್ಳುವಲ್ಲಿ ಎನ್‌ಇಸಿ ಸಂಸ್ಥೆಯ ಪಾತ್ರವನ್ನು ಪ್ರಧಾನಮಂತ್ರಿಯವರು ಹೊಗಳಿದರು. * ಪ್ರಧಾನಿ ನರೇಂದ್ರ ಮೋದಿಯವರು ಕೈಗಾರಿಕಾ ಅಭಿವೃದ್ಧಿ, ತೆರಿಗೆ ಮತ್ತು ಕಾರ್ಮಿಕ ಸೇರಿದಂತೆ ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಸಾಧ್ಯವಾಗುವಂತೆ ಕೈಗೊಳ್ಳಲಾಗುತ್ತಿರುವ ವಿವಿಧ ಸುಧಾರಣೆಗಳ ಕುರಿತು ಅವರು ಚರ್ಚಿಸಿದರು.* ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತದಲ್ಲಿ ಇರುವ ಅವಕಾಶಗಳ ಕುರಿತು ಅವರು ಚರ್ಚಿಸಿದರು.* ಭಾರತದ ದೂರಸಂಪರ್ಕ ವಲಯದಲ್ಲಿ ಎನ್‌ಇಸಿ ಪಾತ್ರವನ್ನು ಹೊಗಳಿದರು* ಡಿಎಕ್ಸ್ ಅಳವಡಿಸುವುದು ಮತ್ತು ಸ್ಮಾರ್ಟ್ ಸಿಟಿಗಳಿಗೆ ಕೊಡುಗೆ ನೀಡುವುದು ಹೇಗೆ ಎಂಬುವುದರ ಬಗ್ಗೆಯೂ ಕೂಡ ಚರ್ಚಿಸಿದ್ದಾರೆ.