Job Description: * ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಆಟಗಾರರಿಗೆ ಹಾಲ್ ಆಫ್ ಫೇಮ್ ಗೌರವ ನೀಡುವುದನ್ನು ಆರಂಭಿಸಿದೆ. ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಈ ಗೌರವ ಪಡೆದ ಮೊದಲ ಎರಡು ಆಟಗಾರರೆನಿಸಿದ್ದಾರೆ.* ಆರ್‌ಸಿಬಿ (RCB) ಪರ ಎಬಿ ಡಿವಿಲಿಯರ್ಸ್ 11 ವರ್ಷ ಆಡಿದ್ದರೆ, ಕ್ರಿಸ್ ಗೇಲ್ 7 ವರ್ಷ ಆಡಿದ್ದಾರೆ.* ಕ್ರಿಸ್ ಗೇಲ್ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ಆರ್ ಸಿಬಿ ಪರವಾಗಿ ಗೇಲ್ ಬಾರಿಸಿದ 175 ರನ್ ಗಳ ಭರ್ಜರ ಇನ್ನಿಂಗ್ಸ್ ಅನ್ನು ನೆನಪಿಸಿಕೊಂಡರು.ಪ್ರಸ್ತುತ ಕ್ರಿಕಟ್ ನಲ್ಲಿ ಕ್ರಿಸ್ ಗೇಲ್ ಗಿಂತ ಉತ್ತಮ ಹಾರ್ಡ್ ಹಿಟ್ಟರ್ ಬ್ಯಾಟ್ಸ್ ಮನ್ ಅನ್ನು ತಾವು ನೋಡಿಲ್ಲ ಎಂದು ಹೇಳಿದರು.* ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡುವುದನ್ನು ನೋಡಬಹುದಾಗಿತ್ತು. ಇದೇ ಮೊದಲ ಬಾರಿಗೆ ಐಪಿಎಲ್ ನ ಫ್ರಾಂಚೈಸಿಯೊಂದು ತನ್ನ ಬೆಸ್ಟ್ ಆಟಗಾರನಿಗೆ ಈ ಗೌರವವನ್ನು ನೀಡಿದೆ.