Job Description: * ಒಲಿಂಪಿಕ್ಸ್‌ನ ಲ್ಲಿ ಬೆಳ್ಳಿ ಪದಕ ಗೆದ್ದಿರುವ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಅಮೀರ್ ಖಾನ್ ಅವರು ಇತ್ತೀಚಿಗೆ ನಿವೃತ್ತಿ ಘೋಷಿಸಿದ್ದಾರೆ.* 35 ವರ್ಷ ವಯಸ್ಸಿನ ಅಮೀರ್ ಖಾನ್ ಅವರು ಈ ಮೂಲಕ 17 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.* ಲೈಟ್ ವೆಲ್ಟರ್ ವೇಟ್ ವಿಭಾಗದ ಅತ್ಯಂತ ಸಮರ್ಥ ಬಾಕ್ಸರ್ ಆಗಿದ್ದ ಅಮೀರ್ ಖಾನ್ ಒಟ್ಟು 40 ಫೈಟ್‌ಗಳ ಪೈಕಿ 34 ರಲ್ಲಿ ಗೆದ್ದು ದಾಖಲೆ ಮಾಡಿದ್ದರು. ವೃತ್ತಿಜೀವನದ ಮೊದಲ 18 ಫೈಟ್‌ಗಳಲ್ಲಿ ಜಯ ಸಾಧಿಸಿದ್ದ ಅವರು ಬ್ರಿಟಿಷ್ ಬಾಕ್ಸರ್‌ಗಳ ಪೈಕಿ ಹೆಚ್ಚು ಜನಪ್ರಿಯರಾಗಿದ್ದರು. * ಅಮೀರ್ ಖಾನ್ 2004 ರ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಸೋತಿದ್ದರು.