Job Description: * ಇತ್ತೀಚಿಗೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತವು ರಾಜೀವ್‌ ಕುಮಾರ್‌ ಅವರನ್ನು ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಿದೆ.* ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕಗೊಂಡಿದ್ದಾರೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿ, ಅತಿ ಹಿರಿಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮೇ 15 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.* ಹಾಲಿ ಮುಖ್ಯ ಆಯುಕ್ತರಾಗಿರುವ ಸುಶೀಲ್ ಚಂದ್ರ ಅವರು 2022 ಮೇ 14 ರಂದು ನಿವೃತ್ತಿಯಾಗಲಿದ್ದಾರೆ.* ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಅವರ ನೇತೃತ್ವದಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಚುನಾವಣೆ ಮತ್ತು 2024 ರ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ.* ರಾಜೀವ್ ಕುಮಾರ್ ಅವಧಿಯು 2025 ರ ಫೆಬ್ರುವರಿ ಮಧ್ಯ ಭಾಗದಲ್ಲಿ ಅಂತ್ಯಗೊಳ್ಳಲಿದೆ.* ಕಾನೂನು ಸಚಿವಾಲಯವು ಹೊರಡಿಸಿದ ಮೇ 12 ರ ಅಧಿಸೂಚನೆಯ ಪ್ರಕಾರ ಸಂವಿಧಾನದ 324 ನೇ ವಿಧಿಯ ಷರತ್ತು(2)ರ ಅನುಸಾರವಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ನೇಮಕಾತಿಯನ್ನು ಮಾಡಿದ್ದಾರೆ.* ಚುನಾವಣಾ ಆಯೋಗದ ಆಯುಕ್ತರಾಗಿ ಕುಮಾರ್ ಅವರು 2020 ಸೆಪ್ಟೆಂಬರ್ 1 ರಂದು ಅಧಿಕಾರ ಸ್ವೀಕರಿಸಿದ್ದರು.* 1984 ಜಾರ್ಖಂಡ್ ಕೇಡರ್‌ ಐಎಎಸ್ ಅಧಿಕಾರಿಯಾಗಿರುವ ಕುಮಾರ್ ಅವರು ಬಿಎಸ್ಸಿ ಹಾಗೂ ಎಲ್‌ಎಲ್ ಬಿ ಪದವೀಧರರು. ಇದರೊಂದಿಗೆ ಅವರು ಸಾರ್ವಜನಿಕ ನೀತಿ ಹಾಗೂ ಸುಸ್ಥಿರತೆಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆದಿದ್ದಾರೆ 1960 ಫೆಬ್ರವರಿ 19 ರಂದು ಜನಿಸಿದ ಕುಮಾರ್ ಅವರು 2017 ಸೆಪ್ಟೆಂಬರ್ ನಿಂದ 2020 ಫೆಬ್ರವರಿ ವರೆಗೆ ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.* ಅನಂತರ ಅವರನ್ನು ಸಿಬ್ಬಂದಿ ಹಾಗೂ ಸಾರ್ವಜನಿಕ ಅಹವಾಲು ಹಾಗೂ ಪಿಂಚಣಿಯ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿತ್ತು.