Job Description: * ಸ್ಟಾರ್ ಆಲ್ರೌಂಡರ್ ಆಟಗಾರರಾಗಿರುವ 'ಬೆನ್ ಸ್ಟೋಕ್ಸ್' ಅವರನ್ನು ಇದೀಗ ಇಂಗ್ಲೆಂಡ್‌ ತಂಡದ ನೂತನ ಟೆಸ್ಟ್ ನಾಯಕನಾಗಿ ನೇಮಕ ಮಾಡಲಾಗಿದೆ ಎಂದು ECB ವರದಿ ಮಾಡಿದೆ. ಇತ್ತೀಚಿಗಷ್ಟೇ 'ಜೋ ರೂಟ್' ಅವರು ಟೆಸ್ಟ್ ನಾಯಕತ್ವದಿಂದ ಹಿಂದೆ ಸರಿದಿದ್ದಾರೆ, ಇದರ ಬೆನ್ನಲ್ಲೇ ಸ್ಟೋಕ್ಸ್ ಅವರು ಇಂಗ್ಲೆಂಡ್‌ ತಂಡದ ಟೆಸ್ಟ್ ನಾಯಕರಾಗಿ ನೇಮಕವಾಗಿದ್ದಾರೆ. * ಈ ಸಂಧರ್ಭದಲ್ಲಿ ಮಾತನಾಡಿದ ಸ್ಟೋಕ್ಸ್ 'ಇಂಗ್ಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸುವ ಅವಕಾಶವನ್ನ ನನಗೆ ನೀಡಿರುವದಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ, ಹಾಗು ಈ ತಂಡವನ್ನು ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ. * ಇದೀಗ ಇಂಗ್ಲೆಂಡ್ ನಾಯಕನಾಗಿ ಸ್ಟೋಕ್ಸ್ ಅವರ ಮೊದಲ ಟೆಸ್ಟ್ ಪಂದ್ಯವು ಜೂನ್. 02 ರಂದು ಲಾರ್ಡ್‌ನಲ್ಲಿ ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ ಎಂದು ತಿಳಿದಿದ್ದಾರೆ. * ಬೆಂಜಮಿನ್ ಆಂಡ್ರ್ಯೂ ಸ್ಟೋಕ್ಸ್ ಇವರು ಇಂಗ್ಲಿಷ್ ಕ್ರಿಕೆಟಿಗರಾಗಿದ್ದಾರೆ, ಪ್ರಸ್ತುತ ಇವರು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿದ್ದಾರೆ ಹಾಗೂ ಇಂಗ್ಲೆಂಡ್ ಏಕದಿನ ಅಂತಾರಾಷ್ಟ್ರೀಯ (ODI) ಹಾಗೂ ಟ್ವೆಂಟಿ 20 ಅಂತಾರಾಷ್ಟ್ರೀಯ (T20I) ತಂಡಗಳಿಗಾಗಿ ಆಟವಾಡುತ್ತಾರೆ. * ಸ್ಟೋಕ್ಸ್ ಅವರು 2013 ರಲ್ಲಿ ಟೆಸ್ಟ್‌ ಪಂದ್ಯವನ್ನು ಆಡಲು ಆರಂಭಿಸಿದ್ದಾರೆ. ಮತ್ತೇ 2019 ರ ಕ್ರಿಕೆಟ್ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಸದಸ್ಯರಾಗಿದ್ದರು, ಇವರನ್ನು 2019 ಮತ್ತು 2020 ರಲ್ಲಿ ವಿಸ್ಡನ್ ಲೀಡಿಂಗ್ ಕ್ರಿಕೆಟಿಗ ಎಂದು ಕರೆಯಲಾಗಿದೆ, ಇವರು 2019 ರಲ್ಲಿ ಅತ್ಯುತ್ತಮ ಪುರುಷರ ಕ್ರಿಕೆಟಿಗನಿಗೆ ICC ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.