Job Description: * ಪ್ರಸ್ತುತ ಬೆಂಗಳೂರು ಮೂಲದ ಮೈಂಡ್‌ ಟ್ರೀ ಸಂಸ್ಥೆಯು, ಲಾರ್ಸೆನ್‌ ಆಯಂಡ್‌ ಟೂಬ್ರೋ ಅಂಗಸಂಸ್ಥೆಯ 'ಎಲ್‌ ಆಯಂಡ್‌ ಟಿ ಇನ್ಫೋಟೆಕ್‌' ಸಂಸ್ಥೆಯ ಜೊತೆಗೆ ವಿಲೀನಗೊಳ್ಳಲಿದೆ ಎಂದಿದ್ದಾರೆ. * ಈ ಎರಡು ಕಂಪನಿಗಳು ವಿಲೀನವಾದ ಬಳಿಕ ಹೊಸದಾಗಿ ರೂಪುಗೊಳ್ಳುವ ಕಂಪನಿಯ ನಿರ್ವಹಣೆಯನ್ನು ಲಾರ್ಸೆನ್‌ ಆಯಂಡ್‌ ಟೂಬ್ರೋ ಎಂಜಿನಿಯರಿಂಗ್‌ ಕಂಪನಿ ವಹಿಸಿಕೊಳ್ಳಲಿದೆ ಹಾಗೂ 2.2 ಬಿಲಿಯನ್‌ ಡಾಲರ್‌ ಮೊತ್ತದ ಕಂಪನಿಯಾಗಿಲಿವೆ. ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದಿದ್ದಾರೆ. L&T ಕಂಪನಿಯು 2019 ರಲ್ಲೇ 'ಮೈಂಡ್‌ ಟ್ರೀ' ಕಂಪನಿಯನ್ನು ಕೊಳ್ಳುವ ಪ್ರಕ್ರಿಯೆಗೆ ಮುಂದಾಗಿದೆ. * ಈ 'ಮೈಂಡ್‌ ಟ್ರೀ' ಹಾಗೂ 'L&T' ಇನ್ಫೋಟೆಕ್‌ಗಳ ವಿಲೀನದಿಂದಾಗಿ ಸೃಷ್ಟಿಯಾಗಲಿರುವ ಹೊಸ ಕಂಪನಿಯು, 'ಮೈಂಡ್‌ ಟ್ರೀ'ಯ ಶೇ. 64 ರಷ್ಟು ಷೇರುಗಳನ್ನು ಹೊಂದಲಿದೆ. ಈ ಕಂಪನಿ ಮೌಲ್ಯ ಪ್ರಸ್ತುತ ಮಾರುಕಟ್ಟೆಯಲ್ಲಿ 63,000 ಕೋಟಿ ರೂ.ಗಳಷ್ಟಿದೆ. ಹಾಗೂ L&T ಇನ್ಫೋಟೆಕ್‌ ಸಂಸ್ಥೆಯ ಶೇ. 74 ರಷ್ಟು ಷೇರುಗಳು ಹೊಸ ಕಂಪನಿಯ ಪಾಲಾಗಲಿದೆ, ಹಾಗೂ ಆ ಕಂಪನಿಯ ಮಾರುಕಟ್ಟೆ ಮೌಲ್ಯ 1 ಲಕ್ಷ ಕೋಟಿ ರೂ.ಗಳಷ್ಟಿದೆ ಎಂದು ತಿಳಿಸಲಾಗಿದೆ. * 'ಮೈಂಡ್‌ಟ್ರೀ' ಲಿಮಿಟೆಡ್ ಭಾರತೀಯ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸೇವೆಗಳು ಹಾಗೂ ಸಲಹಾ ಕಂಪನಿಯಾಗಿದೆ. ಇದು ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಅಷ್ಟೇ ಅಲ್ಲದೇ ಲಾರ್ಸೆನ್ ಹಾಗೂ ಟೂಬ್ರೊ ಗ್ರೂಪ್‌ನ ಒಂದು ಭಾಗವಾಗಿದೆ. ಈ ಕಂಪನಿ 1999 ರಲ್ಲಿ ಸ್ಥಾಪನೆ ಮಾಡಲಾಗಿದೆ. * ಈ ಕಂಪನಿಯು ಇ-ಕಾಮರ್ಸ್, ಮೊಬೈಲ್ ಅಪ್ಲಿಕೇಶನ್‌ಗಳು, ಕ್ಲೌಡ್ ಕಂಪ್ಯೂಟಿಂಗ್, ಡಿಜಿಟಲ್ ರೂಪಾಂತರ, ಡೇಟಾ ಅನಾಲಿಟಿಕ್ಸ್, ಪರೀಕ್ಷೆ, ಎಂಟರ್‌ಪ್ರೈಸ್ ಅಪ್ಲಿಕೇಶನ್ ಏಕೀಕರಣ ಹಾಗೂ ಎಂಟರ್‌ಪ್ರೈಸ್ ಸಂಪನ್ಮೂಲ ಯೋಜನೆಯಲ್ಲಿ ವ್ಯವಹರಿಸುತ್ತದೆ, ಈ ಕಂಪನಿ 2019 ರ ಮಾರ್ಚ್. 31 ರಿಂದ 18 ದೇಶಗಳಲ್ಲಿ 307 ಕ್ಕೂ ಅಧಿಕ ಸಕ್ರಿಯ ಕ್ಲೈಂಟ್‌ಗಳು ಹಾಗೂ 43 ಕಚೇರಿಗನ್ನು ಹೊಂದಿದೆ. * ಸಾಮಾನ್ಯವಾಗಿ L&T ಎಂದು ಕರೆಯುವ ಲಾರ್ಸೆನ್ & ಟೂಬ್ರೊ ಲಿಮಿಟೆಡ್, ಇದು ತನ್ನ ಪ್ರಧಾನ ಕಛೇರಿಯನ್ನು ಮುಂಬೈನಲ್ಲಿ ಹೊಂದಿದೆ. ಈ ಕಂಪನಿಯು ವಿಶ್ವದ ಅಗ್ರ '05' ನಿರ್ಮಾಣ ಕಂಪನಿಗಳಲ್ಲಿ ಒಂದಾಗಿದೆ. ಇದನ್ನು ಭಾರತದಲ್ಲಿ ಆಶ್ರಯ ಪಡೆದ ಇಬ್ಬರು ಡ್ಯಾನಿಶ್ ಇಂಜಿನಿಯರ್‌ಗಳು ಸ್ಥಾಪಿಸಿದರು. * L&T ಗ್ರೂಪ್ 2020 ರ ವೇಳೆಗೆ 118 ಅಂಗಸಂಸ್ಥೆಗಳು, 6 ಸಹೋದ್ಯೋಗಿಗಳು, 25 ಜಂಟಿ-ಉದ್ಯಮ ಮತ್ತು 35 ಜಂಟಿ ಕಾರ್ಯಾಚರಣೆ ಕಂಪನಿಗಳನ್ನು ಒಳಗೊಂಡಿದೆ.