Job Description: * ಪ್ರಸ್ತುತ ಪಾಕಿಸ್ತಾನದ ಪ್ರಧಾನಿ ಇಮ್ರಾನ ಖಾನ್ ಅವರು ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಹಂಗಾಮಿ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಿದ್ದಾರೆ. PTI ಕೋರ್ ಕಮಿಟಿಯ ಸಮಾಲೋಚನೆ ಹಾಗೂ ಅನುಮೋದನೆಯ ನಂತರ ಇಮ್ರಾನ ಖಾನ್ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. * PTI ನಾಯಕ ಹಾಗೂ ನಿರ್ಗಮಿತ ಮಾಹಿತಿ ಸಚಿವ ಫವಾದ್ ಚೌಧರಿ ಅವರು ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರು ಹಂಗಾಮಿ ಪ್ರಧಾನಿ ನೇಮಕಗೊಳ್ಳುವವರೆಗೆ ಖಾನ್ ಪ್ರಧಾನಿಯಾಗಿ ಮುಂದುವರಿಯುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಇದೀಗ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಹಂಗಾಮಿ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಲಾಗಿದೆ. * ಗುಲ್ಜಾರ್ ಅಹ್ಮದ್ ಅವರೊಬ್ಬ ಪಾಕಿಸ್ತಾನಿ ನ್ಯಾಯಶಾಸ್ತ್ರಜ್ಞರಾಗಿದ್ದಾರೆ, ಇವರು 2019 ರ ಡಿಸೆಂಬರ್. 21 ರಿಂದ 2022 ಫೆಬ್ರವರಿ. 01 ರವರೆಗೆ ಪಾಕಿಸ್ತಾನದ 27 ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. * ಅಹ್ಮದ್ ಅವರು ಈ ಹಿಂದೆ 1986 ಜನವರಿ. 18 ರಂದು ವಕೀಲರಾಗಿ ತಮ್ಮ ಕಾನೂನು ವೃತ್ತಿಜೀವನವನ್ನು ಆರಂಭಿಸಿದ್ದಾರೆ. 1988 ಏಪ್ರಿಲ್. 04 ರಂದು ಸಿಂಧ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ಗೆ ಸೇರಿದರು. ನಂತರ 2015 ರ ಸೆಪ್ಟೆಂಬರ್. 15 ರಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ಗೆ ಸೇರ್ಪಡೆಯಾದರು. ಇದಾದ ಬಳಿಕ 2011 ರ ನವೆಂಬರ್. 16 ರಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. * ಈ ಹಿಂದೆ ಇವರು 2021 ರ ಜೂನ್'ನಲ್ಲಿ ಕರಾಚಿಯಾದ್ಯಂತ ಆಸ್ತಿಗಳನ್ನು ಕೆಡವಲು ಆದೇಶವನ್ನು ನೀಡಿದ್ದರು.