Job Description: IPS ಸೇವೆಗೆ ಭಾಸ್ಕರ್ ರಾವ್ ಅವರು ರಾಜೀನಾಮೆಯನ್ನು ನೀಡಿದ್ದಾರೆ. ಇತ್ತೀಚಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದ್ದಾರೆ. ಭಾಸ್ಕರ್ ರಾವ್ ಅವರು ಇಲ್ಲಿಯವರೆಗೆ ರೈಲ್ವೆ ಇಲಾಖೆಯ ಎಡಿಜಿಪಿ(ADGP)ಯಾಗಿ ಕಾರ್ಯನಿರ್ವಹಿಸುತ್ತಿದ್ದರು. * ಭಾಸ್ಕರ್ ರಾವ್ ಅವರು ಸ್ವಯಂ ನಿವೃತ್ತಿ ಕೋರಿ ಈ ಹಿಂದೆ 2021 ರ ಸೆಪ್ಟೆಂಬರ್ 16 ರಂದು ಅರ್ಜಿ ಸಲ್ಲಿಸಿದ್ದರು. ನಿರ್ಧಾರ ಪುನರ್ಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರದಿಂದ ಅವಕಾಶ ನೀಡಲಾಗಿದ್ದು, ಆದರೆ ಸಚಿವಾಲಯದಿಂದ ಉತ್ತರ ಬಾರದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಸರ್ವಿಸ್ ಆಕ್ಟ್ 16(2)ನ ಅಡಿಯಲ್ಲಿ ಭಾಸ್ಕರ್ ರಾವ್ ಅವರು ರಾಜಿನಾಮೆಯನ್ನು ನೀಡಿದ್ದಾರೆ. * ಈ ಆಲ್ ಇಂಡಿಯಾ ಸರ್ವಿಸ್ ಆಕ್ಟ್ 16(2)ನ ಪ್ರಕಾರ ನಿವೃತ್ತಿ ಕೋರಿರುವ ಅಧಿಕಾರಿ ವಯಸ್ಸು 50 ವರ್ಷ ದಾಟಿರಬೇಕು. 20 ವರ್ಷ ಸೇವೆಯನ್ನು ಪೂರ್ಣಗೊಳಿಸರಬೇಕು. ಹಾಗೆಯೇ ಅವರು ನಿವೃತ್ತಿಗೆ ಮನವಿ ಸಲ್ಲಿಸುವ ಸಂಧರ್ಭದಲ್ಲಿ ಅಮಾನತಿನಲ್ಲಿ ಇರಬಾರದು. ಈ ಎಲ್ಲ ನಿಬಂಧನೆಗಳಿಗೆ ಭಾಸ್ಕರ್ ರಾವ್ ಅವರು ನಿವೃತ್ತಿಗೆ ಅರ್ಹರಿರುವ ಕಾರಣ ಅಧಿಕೃತವಾಗಿ ಸೇವೆಗೆ ರಾಜಿನಾಮೆಯನ್ನು ನೀಡಿದ್ದಾರೆ. * ಇತ್ತೀಚಿಗೆ ಇವರು ರಾಜೀನಾಮೆ ನೀಡಿದ ನಂತರ AAP ಪಕ್ಷಕ್ಕೆ ಸೇರಿಕೊಂಡಿದ್ದಾರೆ. * ಭಾಸ್ಕರ್ ರಾವ್ ಅವರು 1990 ರ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ ಇವರು ಬೆಂಗಳೂರು ನಗರ ಪೊಲೀಸ್‌ನಿಂದ ಭಾರತೀಯ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ, 2019 ರ ಆಗಸ್ಟ್. 02 ರಿಂದ 2020 ರ ಆಗಸ್ಟ್. 01 ರಾವ್ ಅವರು ಬೆಂಗಳೂರಿನಿಂದ ಬಂದಿದ್ದಾರೆ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ADGP) ನೇಮಕಗೊಂಡಿದ್ದಾರೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ [1] ಹಾಗೂ ADGP ಮತ್ತು ಆಂತರಿಕ ಭದ್ರತಾ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.