Job Description: * ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿನ ಸದ್ಯದ ಪಠ್ಯಕ್ರಮದ ಚೌಕಟ್ಟನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರವು ಚಲಾನ ಸಮಿತಿಯನ್ನು ರಚಿಸಿ ಆದೇಶವನ್ನು ಹೊರಡಿಸಿದೆ. * ಇತ್ತೀಚಿಗೆ ಪ್ರಾಥಮಿಕ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದೆ, ಶಾಲಾ ಶಿಕ್ಷಣ ( ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ), ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕ ಶಿಕ್ಷಣದ ಬಗ್ಗೆ ಚಾಲನಾ ಸಮಿತಗಳು ಮತ್ತು ಮೂರು ಕ್ಷೇತ್ರಗಳ ಪಠ್ಯಕ್ರಮ ರಚನೆ ಜವಾಬ್ಧಾರಿಯನ್ನು ಹಂಚಿಕೆ ಮಾಡುವ ಮೂಲಕ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ಚಾಲನಾ ಸಮಿತಿಗಳನ್ನು ರಚಿಸಿ ಆದೇಶವನ್ನು ಹೊರಡಿಸಿದೆ. * ಪ್ರಸ್ತುತ ಅಜೀಂ ಪ್ರೇಮ್ ಜಿ ವಿವಿ ಅವರನ್ನು ಶಾಲಾ ಶಿಕ್ಷಣ ರಾಜ್ಯ ಚಾಲನಾ ಸಮಿತಿಗೆ ರಿಷಿಕೇಷ್ ಅಸೋಸಿಯೇಟ್ ಪ್ರೊಫೇಸರ್ ಅಧ್ಯಕ್ಷರನ್ನಾಗಿ ನೇಮಿಸಿದೆ. ಇವರ ಜೊತೆಗೆ ಇನ್ನು 21 ಸದಸ್ಯರು ನೇಮಕ ಮಾಡಿದೆ. ಈ ಸಮಿತಿಯು ಮೂಲಕ 3 ರಿಂದ 5 ನೇ ತರಗತಿಯ ಪ್ರಾಥಮಿಕ, ಹಾಗೂ 6 ರಿಂದ 8ನೇ ತರಗತಿಯ ಮಾಧ್ಯಮಿಕ, ಜೊತೆಗೆ 9 ರಿಂದ 12 ನೇ ತರಗತಿಯ ಪ್ರೌಢ ಶಿಕ್ಷಣದ ಹಂತದಕ್ಕೆ ಸಂಬಂಧಿಸಿರುವ ಪಠ್ಯಕ್ರಮವನ್ನು ರಚಿಸಲಿದ್ದಾರೆ ಎಂದಿದ್ದಾರೆ. * ಸೆಂಟರ್ ಫಾರ್ ಎಜುಕೇಷನ್ ನ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿರುವ ಪದ್ಮಾವತಿ ಅವರನ್ನು ಶಿಕ್ಷಕರ ಶಿಕ್ಷಣ ಪಠ್ಯಕ್ರಮ ರಾಜ್ಯ ಚಾಲನಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಾಗೂ DAERT ನಿರ್ದೇಶಕಿಯಾಗಿರುವ ಸುಮಂಗಲಾ .ವಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕಮಾಡಲಾಗಿದೆ, ಇವರ ಜೊತೆಗೆ ಇನ್ನು 22 ಸದಸ್ಯರು ನೇಮಕಮಾಡಲಾಗಿದೆ ಎಂದು ತಿಳಿಸಿದ್ದಾರೆ. * ಭಾರತ ಸರ್ಕಾರದ ವಯಸ್ಕರ ಶಿಕ್ಷಣದ ನಿವೃತ್ತ ಜಂಟಿ ನಿರ್ದೇಶಕರಾಗಿದ್ದ ಎ ಎಂ ರಾಜಶೇಖರ್ ಅವರನ್ನು ವಯಸ್ಕರ ಶಿಕ್ಷಣ ರಾಜ್ಯ ಚಾಲನಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇವರ ಜೊತೆಗೆ 21 ಜನರನ್ನು ನೇಮಿಸಲಾಗಿದೆ. ಈ ಸಮಿತಿಯು ವಯಸ್ಕರ ಶಿಕ್ಷಣ ಪಠ್ಯಕ್ರಮ ರಚನೆಯ ಕಾರ್ಯವನ್ನು ನಿರ್ವಹಿಸಲಿದೆ ಎಂದು ರಾಜ್ಯ ಸರ್ಕಾರವು ವರದಿ ಮಾಡಿದೆ.